ಈ ಹಳ್ಳಿಯ ಏಳು ಜನರಿಗೆ ಇದೆಯಂತೆ ‘ಕಾ ಕಾ ‘ಕಂಟಕ|ಮನೆಯ ಹೊಸ್ತಿಲು ದಾಟಲು ಬಿಡದೆ ಕಾದು ಕೂರುತ್ತೆ ಅಂತೆ ಈ ಕಾಗೆ|ಈ ಕಾಗೆ ದ್ವೇಷದ ಹಿಂದಿರುವ ಮರ್ಮ?

ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಕೇಳಿದ್ದೇವೆ. ಹಾವು ತನಗೆ ನೋವು ಕೊಟ್ಟವರನ್ನು ಜನ್ಮಜನ್ಮಾಂತರದವರೆಗೆ ಬಿಡುವುದಿಲ್ಲವಂತೆ. ಇಂಥ ಮಾತುಗಳನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಹೊಸ ಘಟನೆ ನಡೆದಿದೆ. ಇಲ್ಲೊಂದು ಕಾಗೆ ಹಳ್ಳಿ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಈ ಊರಿನ ಜನರು ಹೊರ ಬಂದರೆ ಸಾಕು ಈ ಕಾಗೆ ಹಾರಿ ಬಂದು ತಲೆಗೆ ಕುಕ್ಕುತ್ತದೆ.

ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿ ಸಮೀಪದ ಓಬಳಾಪುರ ಗ್ರಾಮಸ್ಥರು ಕಾಗೆ ಕಾಟದಿಂದ ಬೇಸತ್ತು ಹೋಗಿದ್ದಾರೆ. ಹೌದು ಈ ಕಾಗೆಯ ದಾಳಿಯಿಂದ ಪಾರಾಗಲು ಪಾವಗಡ ಶನೀಶ್ವರ ಸನ್ನಿಧಿ ಸೇರಿ ಇತರೆ‌ ಪುಣ್ಯ ಸ್ಥಳಗಳ ದರ್ಶನ ಪಡೆದು ಬಂದರೂ ಕಾಗೆ ಕಾಟ ತಪ್ಪಿಲ್ಲ.

ಏಳು ಜನರನ್ನು ಗುರಿಯಾಗಿಸಿಕೊಂಡು ಈ ಕಾಗೆ ಕಾಟ ಕೊಡುತ್ತದೆ. ಈ ಏಳು ಜನರು ಹೊರ ಬಂದರೆ ಸಾಕು ದಾಳಿ ಮಾಡುತ್ತದೆ. ಕಳೆದೊಂದು ತಿಂಗಳಿನಿಂದ ಈ ರೀತಿ ನಡೆಯುತ್ತಿದೆ. ಈ ಕಾಗೆಗೆ ಏನೂ ತೊಂದರೆ ಕೊಡದಿದ್ದರೂ ಈ ರೀತಿ ದಾಳಿ ಮಾಡುತ್ತಿದೆ.

ಬೆಳಗ್ಗೆ ಫ್ರೆಶ್ ಮೂಡ್ ನಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮುಂದಾದರೆ ಕಾಗೆ ಕಾಟ ಕೊಡುತ್ತದೆಯಂತೆ. ನಾವು ಕಾಗೆಗೆ ಏನೂ ಉಪದ್ರ ಮಾಡದಿದ್ದರೂ ಈ ಕಾಗೆ ದಾಳಿ ನಡೆಸುವುದನ್ನು ಮಾತ್ರ ನಿಲ್ಲಿಸಿಲ್ಲ.

ಈ ಮೊದಲು ಎ ಕೆ ಕಾಲೋನಿಯ ಪರಶುರಾಮಪ್ಪ ಎಂಬುವವರ ಮೇಲೆ ಇದೇ ಕಾಗೆ ತನ್ನ ಪ್ರತಾಪ ತೋರುತ್ತಿತ್ತು. ಇದರಿಂದ ತಪ್ಪಿಸಿಕೊಂಡು ಹರಸಾಹಸ ಪಟ್ಟರು ಪರಶುರಾಮಪ್ಪ. ಇದೀಗ ಸರಕಾರಿ ಶಾಲೆ ಪಕ್ಕದ ರಸ್ತೆಯ ಇಕ್ಕೆಲಗಳಲ್ಲಿನ ಮನೆ ಬಳಿ ಈ ಕಾಗೆ ಹಾರಾಡುತ್ತಿದೆ. ಈ ಏಳು ಜನರನ್ನು ಮಾತ್ರ ಬಿಡುತ್ತಿಲ್ಲ. ಮನೆಯ ಹೊಸ್ತಿಲು ದಾಟಿದರೆ ಸಾಕು ಈ ಏಳು ಮಂದಿಗೆ ಕಾಗೆ ದರ್ಶನ ಖಂಡಿತ ಆಗುತ್ತದೆ. ಅಂದ ಹಾಗೆ ಈ ಕಾಗೆಯ ಸೇಡಿನ ಹಿಂದಿನ ಮರ್ಮವೇನು ಎಂದು ಊರಿನವರಿಗೆ ಇಲ್ಲಿಯವರೆಗೂ ಗೊತ್ತಾಗಿಲ್ಲವಂತೆ.

Leave A Reply