ಶೀಘ್ರದಲ್ಲೇ ಕೋವಿಡ್ ಅಂತ್ಯ ಎಂದ ವಿಶ್ವ ಆರೋಗ್ಯ ಸಂಸ್ಥೆ

ಯುರೋಪ್‌ನಲ್ಲಿ ಪ್ರಸ್ತುತ ಓಮೈಕ್ರಾನ್ ಅಲೆ ಅಂತ್ಯವಾದ ನಂತರ, ವರ್ಷದ ಕೊನೆಗೆ ವೈರಸ್ ಮತ್ತೆ ಮರುಕಳಿಸಿದರೂ ಈ ಪ್ರದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯು ಕೊನೆಗೊಳ್ಳಬಹುದೆಂಬ ಆಶಾಭಾವನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ (World Health Organization) (WHOs) ಯುರೋಪ್ ನಿರ್ದೇಶಕರಾದ ಹ್ಯಾನ್ಸ್ ಕ್ಲಗ್ ವ್ಯಕ್ತಪಡಿಸಿದ್ದಾರೆ. ಸುದ್ದಿ ಸಂಸ್ಥೆ ಏಜೆನ್ಸ್ ಫ್ರಾನ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ತಿಳಿಸಿದ ಹ್ಯಾನ್ಸ್ ಮಾರ್ಚ್ ವೇಳೆಗೆ 60% ನಷ್ಟು ಯುರೋಪಿಯನ್ನರು ಕೊರೋನಾ ವೈರಸ್‌ನ ಓಮೈಕಾನ್ ರೂಪಾಂತರಕ್ಕೆ ಒಳಗಾಗಬಹುದು ಎಂದು ತಿಳಿಸಿದ್ದಾರೆ.

ಸಾಂಕ್ರಾಮಿಕ (Epidemic) ಅಂತ್ಯವನ್ನು ಸಮೀಪಿಸುತ್ತಿದೆ ಎಂಬ ಸೂಚನೆಯನ್ನು ಈ ಪ್ರದೇಶವು ತೋರಿಸುತ್ತಿದೆ ಎಂದು APP ಕೂಗೆ ತಿಳಿಸಿದ್ದಾರೆ.

ಪ್ರಸ್ತುತ ಓಮೈಕ್ರಾನ್ ತೀವ್ರತೆ ಕೊನೆಯಾದೊಡನೆ, ಕೆಲವು ವಾರಗಳು ಇಲ್ಲವೇ ತಿಂಗಳುಗಳವರೆಗೆ ಜಾಗತಿಕ ರೋಗನಿರೋಧಕ ಶಕ್ತಿ ಇರುತ್ತದೆ. ಇದು ಒಂದಾ ಲಸಿಕೆಯ ಕಾರಣದಿಂದ ಇಲ್ಲದಿದ್ದರೆ ಸೋಂಕಿನಿಂದ ಜನರು ಪಡೆದುಕೊಂಡ ರೋಗ ನಿರೋಧಕ ಸಾಮರ್ಥ್ಯದಿಂದ ಇಲ್ಲವೇ ಋತುಗಳ ನಡುವೆ ತಾಪಮಾನದಲ್ಲಿ ಉಂಟಾಗುವ ವ್ಯತ್ಯಾಸದಿಂದ ಎಂದು ತಿಳಿಸಿದ್ದಾರೆ.

ವರ್ಷದ ಅಂತ್ಯದ ವೇಳೆಗೆ ಕೋವಿಡ್-19 ಮರುಕಳಿಸಿದರೂ ಸಾಂಕ್ರಾಮಿಕದ ಅವಧಿ ಕೊನೆಗೊಳ್ಳಲಿದೆ ಎಂಬ ಆಶಾಭಾವನೆ ಇದೆ ಎಂದು ಕ್ಲಗ್ ತಿಳಿಸಿದ್ದಾರೆ.

Leave A Reply

Your email address will not be published.