ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ : ವೇಳಾಪಟ್ಟಿ ಪ್ರಕಟ, ಹೆಚ್ಚಿನ ಮಾಹಿತಿ ಇಲ್ಲಿದೆ

ಉಡುಪಿ : 2020-21 ನೇ ಸಾಲಿನ ಸರಕಾರಿ ಪ್ರೌಢಶಾಲಾ ಶಿಕ್ಷಕರ ಅಂತರ್ ಘಟಕ ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಕೌನ್ಸಿಲಿಂಗ್ ಮಂಗಳವಾರದಿಂದ ಪ್ರಾರಂಭಗೊಳ್ಳಲಿದೆ.

ಸಹಶಿಕ್ಷಕರ ಕ್ರಮಸಂಖ್ಯೆ 151-300 ರವರೆಗಿನ 150 ಅರ್ಜಿಗಳಿಗೆ ಜನವರಿ 25 ರಂದು, ಕ್ರಮ ಸಂಖ್ಯೆ 301-500 ರವರೆಗಿನ 200 ಅರ್ಜಿಗಳಿಗೆ ಜನವರಿ 27 ರಂದು, ಕ್ರ.ಸಂಖ್ಯೆ 501 ರಿಂದ 700 ರವರೆಗಿನ 200 ಅರ್ಜಿಗಳಿಗೆ ಜನವರಿ 28 ರಂದು, ಕ್ರ. ಸಂಖ್ಯೆ 701 ರಿಂದ 900 ರವರೆಗಿನ 200 ಅರ್ಜಿಗಳಿಗೆ ಜನವರಿ 31 ರಂದು, ಕ್ರ.ಸಂಖ್ಯೆ 901 ರಿಂದ 1164 ರವರೆಗಿನ 264 ಅರ್ಜಿಗಳಿಗೆ ಫೆ.1 ರಂದು ಬೆಳಗ್ಗೆ 10 ರಿಂದ ಹಾಗೂ ದೈಹಿಕ ಶಿಕ್ಷಕರ ಕ್ರ.ಸಂಖ್ಯೆಯಲ್ಲಿ 1-196 ರವರೆಗಿನ 196 ಅರ್ಜಿಗಳಿಗೆ ಮತ್ತು ವಿಶೇಷ ಶಿಕ್ಷಕರ 1-124 ರವರೆಗಿನ 124 ಅರ್ಜಿಗಳಿಗೆ ಫೆ.2 ರಂದು ಬೆಳಗ್ಗೆ 9 ರಿಂದ ಅಪರಾಹ್ನ 2 ಗಂಟೆಯವರೆಗೆ ಕೌನ್ಸಿಲಿಂಗ್ ನಡೆಯಲಿದೆ.

ಅಂತರ್ ಘಟಕ ವಿಭಾಗದ ಹೊರಗಿನ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಯ ಕೌನ್ಸಿಲಿಂಗ್ ಗೆ ಸಂಬಂಧಿಸಿದಂತೆ, ಸಹ ಶಿಕ್ಷಕರು, ದೈ.ಶಿ‌.ಶಿಕ್ಷಕರು ಮತ್ತು ವಿಶೇಷ ಶಿಕ್ಷಕರಿಗೆ ಫೆ. 3 ರಂದು ಬೆಳಗ್ಗೆ 10 ರಿಂದ ಮಣಿಪಾಲದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯು ನಡೆಯಲಿದ್ದು, ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಎಲ್ಲಾ ಶಿಕ್ಷಕರು ನಿಗದಿಪಡಿಸಿದ ವೇಳಾಪಟ್ಟಿಯಂತೆ‌ ಕೌನ್ಸಿಲಿಂಗ್ ಗೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಸಾರ್ವಜನಿಕ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.