ಈ ರಾಜ್ಯದಲ್ಲಿ ಹುಡುಗರಿಗೂ ‘ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ ಮಾಡಿದ್ದಾರಂತೆ
ಸರ್ಕಾರಿ ಶಾಲೆಗೆ ದಾಖಲಾದ ಹದಿಹರೆಯದ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ಗಳನ್ನು ಒದಗಿಸುವ ನಿತೀಶ್ ಕುಮಾರ ಸರ್ಕಾರದ ಸದುದ್ದೇಶದ ಯೋಜನೆಯು ಅಗತ್ಯವಿಲ್ಲದ ಫಲಾನುಭವಿಗಳನ್ನೂ ತಲುಪಿದೆ.
ಬಿಹಾರದ ಸರನ್ ಜಿಲ್ಲೆಯ ಮಾಂಝಿ ಬ್ಲಾಕ್ನಲ್ಲಿರುವ ಸರ್ಕಾರಿ ಶಾಲೆಯಾದ ಹಲ್ಲೋರಿ ಸಾಹ್ ಹೈಸ್ಕೂಲ್ ನಲ್ಲಿ ಈ ಯೋಜನೆಯ ಅವ್ಯವಹಾರ ಕಂಡುಬಂದಿದೆ.
ಯೋಜನೆಯ ಹಣ ಬಳಕೆಯಲ್ಲಿ ನಡೆದಿರುವ ಈ ಆಕ್ರಮಗಳನ್ನು ಶಾಲೆಯ ಮುಖ್ಯೋಪಾಧ್ಯಾಯರು ಪತ್ತೆ ಹಚ್ಚಿದ್ದು, 2016 17ನೇ ಸಾಲಿನಲ್ಲಿ ಶಾಲೆಯ ಕನಿಷ್ಠ ಏಳು ಹುಡುಗರಿಗೆ ಸ್ಯಾನಿಟರಿ ನ್ಯಾಪ್ಟಿನ್ ಗಾಗಿ ಹಣವನ್ನು (ವಾರ್ಷಿಕವಾಗಿ ತಲಾ 150 ರೂ.) ವಿತರಿಸಲಾಗಿದೆ ಎಂದು ಮುಖ್ಯೋಪಾಧ್ಯಾಯರು ಸಕ್ಷಮ ಪ್ರಾಧಿಕಾರಕ್ಕೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ’ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಅಕ್ರಮದ ತನಿಖೆಗಾಗಿ ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಫಲಿತಾಂಶಗಳ ಆಧಾರದ ಮೇಲೆ ತಪ್ಪಿತಸ್ಥ ಸಾರ್ವಜನಿಕ ಸೇವಕರ ವಿರುದ್ಧ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.