‘ಬೂಸ್ಟರ್ ಡೋಸ್ ‘ಕುರಿತು ಕೊರೋನ ಸೋಂಕು ಹೊಂದಿದ್ದ ವ್ಯಕ್ತಿಗಳಿಗೆ ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಮಹತ್ವದ ಮಾಹಿತಿ
ಕೊರೋನದಿಂದ ಮುಕ್ತಗೊಳ್ಳಲು ನೀಡುತ್ತಿರುವ ಕೋವಿಡ್-19 ಲಸಿಕೆಯ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದ್ದು,ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿಗಳು ಗುಣಮುಖರಾದ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬಹುದು ಎಂದು ತಿಳಿಸಿದೆ.
ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಗುಂಪು ಅವರ ಶಿಫಾರಸ್ಸಿನ ಪ್ರಕಾರ, ಎರಡನೇ ಡೋಸ್ ಹಾಗೂ ಮುನ್ನೆಚ್ಚರಿಕೆ ಡೋಸ್ ಪಡೆಯಬೇಕಿರುವ ಎಲ್ಲ ಅರ್ಹ ಫಲಾನುಭವಿಗಳಿಗೂ ಇದು ಅನ್ವಯಿಸುತ್ತದೆ.
ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ಅವರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಂಬಂಧ ಪತ್ರ ಬರೆದಿದ್ದು, ಮುನ್ನೆಚ್ಚರಿಕಾ ಡೋಸ್ ಗೆ ಸಂಬಂಧಿದಂತೆ ಹಲವು ಮನವಿಗಳನ್ನು ಸ್ವೀಕರಿಸಿದ್ದೇವೆ. ಮುನ್ನೆಚ್ಚರಿಕಾ ಡೋಸ್ ಗೆ ಅರ್ಹರಾಗಿರುವ ವ್ಯಕ್ತಿಗಳು ಕೊರೊನಾ ಸೋಂಕಿರುವುದು RTPCR ಅಥವಾ SARS-2 ಕೋವಿಡ್ 19 ಲ್ಯಾಬ್ ಪ್ರಯೋಗಾಲಯದಲ್ಲಿ ಸಾಬೀತಾದರೆ ಅವರು ಸೋಂಕಿನಿಂದ ಚೇತರಿಸಿಕೊಂಡು ಮೂರು ತಿಂಗಳ ನಂತರ ಲಸಿಕೆ ಪಡೆಯಬಹುದು ಎಂದು ಹೇಳಿದ್ದಾರೆ.