ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ 85ನೇ ರ‍್ಯಾಂಕ್!! ಕಡಬದ ಮತ್ತೋರ್ವ ಯುವತಿ ವರ್ಷಿತಾ ಪಿ.ಎಸ್.ಐ ಹುದ್ದೆಗೆ ಆಯ್ಕೆ

ರಾಜ್ಯ ಸಿವಿಲ್ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ವರ್ಷಿತಾ ಪಿ.ಕೆ 85 ನೇ ರಾಂಕ್ ಪಡೆದು ಹುದ್ದೆಗೆ ಆಯ್ಕೆಯಾಗಿದ್ದಾರೆ.

ವರ್ಷಿತ ಅವರು ಮೊರಾರ್ಜಿ ದೇಸಾಯಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣವನ್ನು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಹಾಗೂ ಮಂಗಳೂರಿನ ಫಿಷರೀಸ್ ವಿಜ್ಞಾನ ಕಾಲೇಜಿನಲ್ಲಿ ಪಡೆದಿದ್ದಾರೆ.

ವರ್ಷಿತಾ ಕಡಬ ತಾಲೂಕಿನ ರೆಂಜಿಲಾಡಿ ನಿವಾಸಿ ಕುಮಾರ್ ಜನಾರ್ಧನ ಹಾಗೂ ಬಿಳಿನೆಲೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರೇಮ ಕುಮಾರಿ ಅವರ ಪುತ್ರಿ.

Leave A Reply

Your email address will not be published.