ಬೆಳ್ತಂಗಡಿ:ಕುತ್ಯಾರಿನಲ್ಲಿ ನಿಧಿಗಾಗಿ ಶೋಧ ನಡೆಸಿರೋ ಅನುಮಾನ|ದೈವದ ಕಲ್ಲಿನ ಪಕ್ಕವೇ ಐದು ಅಡಿಯ ಹೊಂಡ ಪತ್ತೆ
ಬೆಳ್ತಂಗಡಿ: ಕುತ್ಯಾರಿನಲ್ಲಿ ನಿಧಿಗಾಗಿ ಶೋಧ ನಡೆಸಲು ಹೊಂಡ ಅಗೆದಿರುವ ಅನುಮಾನ ವ್ಯಕ್ತವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಕುತ್ಯಾರು ಪ್ರದೇಶದಲ್ಲಿ ದಿವಂಗತ ಧೂಮ ಎಂಬುವವರ ಮನೆಗೆ ಹೋಗುವ ಹೊಸರಸ್ತೆಯಲ್ಲಿ ನಡೆದಿದ್ದು, ಪ್ರದೇಶದಲ್ಲಿ ಒಂದು ಲಿಂಬೆ ಜೊತೆಗೆ ಹುತ್ತದ ಬದಿಯಲ್ಲಿ ಕಬ್ಬಿಣದ ಸಲಾಕೆ ಪತ್ತೆಯಾಗಿದೆ.
ಇದೊಂದು ದೊಡ್ಡ ಕಾಡಾಗಿದ್ದು, ನಿಧಿ ಇರುವ ಅನುಮಾನದಿಂದ ಹೊಂಡ ತೆಗೆದಿದ್ದು,ಪೂಜೆ ಮಾಡಲು ಪ್ರಯತ್ನ ಪಟ್ಟಿರೋ ಅನುಮಾನ ವ್ಯಕ್ತವಾಗಿದೆ.ಈ ಜಾಗ ದಾಯಕರ್ ಭಟ್ ಎಂಬುವವರದಾಗಿದ್ದು, ಮರದ ಅಡಿಯಲ್ಲಿ ಪೂರ್ವಜರ ಕಾಲದಿಂದಲೂ ಪಂಜುರ್ಲಿ ಮತ್ತು ಮಯಂತಿ ಎಂಬ ದೈವವನ್ನು ಆರಾಧಿಸಿಕೊಂಡು ಬಂದಿದ್ದಾರೆ.ಇದೇ ದೈವದ ಕಲ್ಲಿನ ಪಕ್ಕದಲ್ಲಿ ಹುತ್ತ ಇದ್ದು ಅದರ ಕೆಳಗಡೆಯೇ ಐದು ಅಡಿ ಗುಂಡಿ ಅಗೆದಿರೋದು ಪತ್ತೆಯಾಗಿದೆ.
ಇದು ಮಾನವರೇ ಸಲಾಕೆಯಿಂದ ಮಣ್ಣು ಅಗೆದು ನಿರ್ಮಿಸಿದ ರೀತಿಲಿ ಇದ್ದು,ಈ ಪ್ರದೇಶದಲ್ಲಿ ಮೊದಲು ಕೊಪ್ಪರಿಗೆ ಇತ್ತು ಎಂಬ ಮಾತಿದೆ.ದೈವದ ಕಲ್ಲಿನ ಹತ್ತಿರವೇ ಈ ಹೊಂಡ ತೆಗೆದಿರೋದು ಅನುಮಾನ ಸೃಷ್ಟಿಸಿದೆ. ಪ್ರತ್ಯಕ್ಷದರ್ಶಿಗಳು ನೋಡುವಾಗ ಇದ್ದ ಲಿಂಬೆ, ಕಬ್ಬಿಣದ ಸಲಾಕೆ ಮರುದಿವಸ ರಸ್ತೆಯಲ್ಲಿ ಬಿದ್ದಿರೋದು ಮತ್ತಷ್ಟು ಅನುಮಾನ ಸೃಷ್ಟಿಸಿದ್ದು ಈ ಘಟನೆ ಹೊಸದಾಗಿ ರಸ್ತೆ ನಿರ್ಮಿಸಿದ ಮೇಲೆ ಬೆಳಕಿಗೆ ಬಂದಿದ್ದು ಯಾವಾಗ ಈ ಕಾರ್ಯ ನಡೆದಿದೆ ಎಂಬುದು ತಿಳಿದಿಲ್ಲ.