ಅದ್ಭುತ ಸಾಧನೆ ಮಾಡಿ ಇತಿಹಾಸ ಬರೆದ ವೈದ್ಯಕೀಯ ತಂಡ|ಹಂದಿಯ ಎರಡೂ ಮೂತ್ರಪಿಂಡಗಳನ್ನು ಮೆದುಳು ಸತ್ತ ವ್ಯಕ್ತಿಯ ದೇಹಕ್ಕೆ ಕಸಿ ಮಾಡುವ ಮೂಲಕ ಯಶಸ್ವಿ
ಮನುಷ್ಯರ ಅಂಗಾಂಗವನ್ನು ಮಾನವರಿಗೆ ಕಸಿ ಮಾಡುವುದು ಸಾಮಾನ್ಯ. ಆದರೆ ಅಮೇರಿಕನ್ ವೈದ್ಯರು ಮತ್ತೊಂದು ಅದ್ಭುತ ಸಾಧನೆಯೊಂದನ್ನು ಮಾಡಿದ್ದು,ಇತಿಹಾಸವನ್ನೇ ಸೃಷ್ಟಿಸಿದ್ದಾರೆ.
ಹೌದು.ಈ ಕಾರ್ಯಾಚರಣೆಯನ್ನು ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾಡಲಾಗಿದ್ದು,ಅಮೇರಿಕನ್ ವೈದ್ಯರು ಈ ಬಾರಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಮೆದುಳು ಸತ್ತ ವ್ಯಕ್ತಿಯ ದೇಹಕ್ಕೆ ಕಸಿ ಮಾಡುವ ಮೂಲಕ ಯಶಸ್ಸು ಕಂಡಿದ್ದಾರೆ.
ಮಾಹಿತಿಯ ಪ್ರಕಾರ, ಅಲ್ಲಿ ವಾಸಿಸುವ 57 ವರ್ಷದ ಜಿಮ್ ಪಾರ್ಸನ್ಸ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದರು, ನಂತರ ಅವರ ಮೆದುಳು ಡೆಡ್ ಆಗಿದೆ ಎಂದು ಘೋಷಿಸಲಾಗಿದೆ. ಇದರ ನಂತರ, ಪಾರ್ಸನ್ಸ್ ಕುಟುಂಬದ ಒಪ್ಪಿಗೆಯೊಂದಿಗೆ ರೋಗಿಗೆ ತಳೀಯವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಕಸಿ ಮಾಡಲಾಗಿದೆ. ಅಷ್ಟೇ ಅಲ್ಲ ಕಸಿ ಪ್ರಕ್ರಿಯೆಯ ಬಳಿಕ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಎನ್ನಲಾಗಿದೆ.
ಇದಕ್ಕೂ ಮುನ್ನ ಅಮೆರಿಕದ ಮೇರಿಲ್ಯಾಂಡ್ ಆಸ್ಪತ್ರೆಯ ವೈದ್ಯರ ತಂಡವೊಂದು ತಳೀಯವಾಗಿ ಮಾರ್ಪಡಿಸಿದ ಹಂದಿಯ ಹೃದಯವನ್ನು 57 ವರ್ಷದ ಬೆನೆಟ್ ಡೇವಿಡ್‌ಗೆ ಯಶಸ್ವಿಯಾಗಿ ಕಸಿ ಮಾಡಿ, ವ್ಯಕ್ತಿಯ ಪ್ರಾಣ ಉಳಿಸಿದ್ದರು.ಪ್ರಾಣಿಗಳ ಅಂಗಾಗಗಳನ್ನು ಮನುಷ್ಯರಿಗೆ ಕಸಿ ಮಾಡಲು ದೀರ್ಘಕಾಲದಿಂದ ಸಂಶೋಧನೆ ನಡೆದಿದೆ. ಅಂತಹ ಪರಿಸ್ಥಿತಿಯಲ್ಲಿ, ಜಿಮ್ ಪಾರ್ಸನ್ಸ್ ಮತ್ತು ಬೆನೆಟ್ ಡೇವಿಡ್ನಲ್ಲಿ ಕಸಿ ಮಾಡಿದ ನಂತರ ಹಂದಿಗಳ ಮೂತ್ರಪಿಂಡ ಮತ್ತು ಹೃದಯವು ಸರಿಯಾಗಿ ಕೆಲಸ ಮಾಡಿದರೆ, ವೈದ್ಯಕೀಯ ಲೋಕದಲ್ಲಿ ಅದೊಂದು ಮಹತ್ತರ ಸಾಧನೆಯೇ ಎಂದು ಹೇಳಬಹುದಾಗಿದೆ.