ಹೊಸ ವಿನ್ಯಾಸದ ಕಿಟ್ ಕ್ಯಾಟ್ ಕವರ್ ನಲ್ಲಿ ಪುರಿ ಜಗನ್ನಾಥನ ಫೋಟೋ!! ನೆಸ್ಲೆ ಯ ನಡೆಗೆ ಗ್ರಾಹಕರಿಂದ ಆಕ್ರೋಶ

ಅತೀಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ ಕಿಟ್ ಕ್ಯಾಟ್ ಚಾಕೊಲೇಟ್ ತನ್ನ ಸಂಸ್ಥೆಯು ಮಾಡಿದ ಎಡವಟ್ಟಿನಿಂದ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ನೆಸ್ಲೆ ಇಂಡಿಯವು ಕಿಟ್ ಕ್ಯಾಟ್ ಚಾಕೊಲೇಟ್ ನ ಕವರ್ ನಲ್ಲಿ ಹೊಸ ವಿನ್ಯಾಸವನ್ನು ತಂದಿದ್ದು, ಹೊಸ ರ್ಯಾಪರ್ ನಲ್ಲಿ ಪುರಿ ಜಗನ್ನಾಥನ ಫೋಟೋ ವನ್ನು ಹಾಕಲಾಗಿತ್ತು. ಇದರಿಂದ ಆಕ್ರೋಶತಾರಾದ ಗ್ರಾಹಕರು ಚಾಕೊಲೇಟ್ ಕವರ್ ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.


Ad Widget

Ad Widget

Ad Widget

ಸದ್ಯ ನೆಸ್ಲೆ ಯು ಕ್ಷಮೆ ಯಾಚಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಉದ್ದೇಶಗಳು ಇರಲಿಲ್ಲ, ರೂಪಿಸಲಾದ ಹೊಸ ವಿನ್ಯಾಸದಲ್ಲಿ ತಪ್ಪಿದ್ದು, ಅದನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಜಾಲತಾಣದಲ್ಲಿ ಬರೆದುಕೊಂಡಿದೆ.

Leave a Reply

error: Content is protected !!
Scroll to Top
%d bloggers like this: