ಕಡಬ: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ 39 ನೇ ರಾಂಕ್!!
ಕುಂತೂರು ಕೋಚಕಟ್ಟೆಯ ಬದ್ರುನಿಶಾ ಪಿ.ಎಸ್.ಐ ಹುದ್ದೆಗೆ ಆಯ್ಕೆ

ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷೆಯಲ್ಲಿ 39 ನೇ ರಾಂಕ್ ಪಡೆದ ಕಡಬ ತಾಲೂಕಿನ ಪೆರಾಬೆ ಗ್ರಾಮದ ಯುವತಿ ಬದ್ರುನಿಶಾ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಗ್ರಾಮೀಣ ಭಾಗವಾದ ಕುಂತೂರು ಕೋಚಕಟ್ಟೆ ಮೂಲದ ಈಕೆ ತನ್ನ ಪ್ರಾಥಮಿಕ ಶಿಕ್ಷಣವನ್ನು ಕುಂತೂರು ಶಾಲೆಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಸೈಂಟ್ ಜಾರ್ಜ್ ಪ್ರೌಢ ಶಾಲೆ ಕುಂತೂರ ಪದವು ಇಲ್ಲಿ ಪಡೆದು, ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ನಂತರ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸ್ ಗಾಂಧೀ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರು ಇಲ್ಲಿ ಬಿಸ್ಸಿ ಪದವಿ ಪಡೆದಿದ್ದಾರೆ.

ರಾಂಕ್ ಪಡೆದ ಬದ್ರುನಿಶಾ ಪೆರಾಬೆ ಕೋಚಕಟ್ಟೆ ನಿವಾಸಿ ಎಕೆ ಇಸ್ಮಾಯಿಲ್ ಹಾಗೂ ಜುಬೈದ ಹೆಂತಾರು ದಂಪತಿಗಳ ಪುತ್ರಿ.

Leave A Reply

Your email address will not be published.