ಈ ಗ್ರಾಮದ ಸುತ್ತಲೂ 9 ದಿನಗಳ ಕಾಲ ಮುಳ್ಳಿನ ಬೇಲಿ | ಕೊರೊನಾ ಕಾರಣಕ್ಕಾಗಿ ಅಲ್ಲ ,ಶತ ಶತಮಾನಗಳಿಂದಲೂ ನಡೆಯುತ್ತಿದೆ ಈ ಪದ್ದತಿ
ಕೊರೋನ ಮೂರನೇ ಅಲೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಭೀತಿಯಲ್ಲಿ ಇಡೀ ರಾಜ್ಯವಿದ್ದರೆ, ಈ ಗ್ರಾಮದಲ್ಲಿ ಊರಿಗೆ ಊರೇ ಬೇಲಿ ಹಾಕಿಕೊಂಡಿದೆ.
ಶತ ಶತ ಮಾನಗಳಿಂದಲೂ ತನ್ನದೇ ಆಚರಣೆ ಮೂಲಕ ಮನ ಮಾತಾಗಿರುವ ಗ್ರಾಮವೊಂದು ದಾವಣಗೆರೆ ತಾಲೂಕಿನಲ್ಲಿದೆ. ಇಲ್ಲಿ ಕಕ್ಕರಗೊಳ್ಳ ಗ್ರಾಮದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ಜಾತ್ರೆ ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತದೆ.
ಇಡೀ 3-4 ಕಿಮೀನಷ್ಟು ಗ್ರಾಮದ ಸುತ್ತಲೂ 3-4 ಊರಿನ ಜನರ ಸಹಕಾರದಲ್ಲಿ ದೇವಸ್ಥಾನ ಸಮಿತಿಯವರು ಮುಳ್ಳು ಬೇಲಿಯನ್ನು ಊರ ಹೊರಭಾಗ ಹೊರ ಭಾಗಕ್ಕೆ ಸಾಲಾಗಿ ಹಾಕುವ ಮೂಲಕ ಮಾಹಾಮಾರಿಗಳಿಂದ ಗ್ರಾಮದ ಜನ. ಜಾನುವಾರುಗಳು.
ಗ್ರಾಮವನ್ನು ಕಾಪಾಡುವಂತೆ ಪ್ರಾರ್ಥಿಸಿ, ಬೇಲಿ ಹಾಕುತ್ತಾರೆ. ಬುಧವಾರದಿಂದ ಬರೋಬ್ಬರಿ 9 ದಿನಗಳ ಕಾಲ ಇಡೀ ಊರಿಗೆ ಊರೇ ಮುಳ್ಳಿನ ಬೇಲಿಯಲ್ಲಿ ಬಂಧಿಯಾಗುತ್ತದೆ.