ಕಾರ್ಕಳ: ಕೊರಗಜ್ಜನ ವೇಷ ಹಾಕಿ ಅವಮಾನ ಎಸಗಿದ ಹಿಂದೂ ಯುವಕ!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ-ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

Share the Article

ಕಾರ್ಕಳ: ಸ್ಥಳೀಯ ವ್ಯಕ್ತಿಯೊಬ್ಬರು ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ನಡೆಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚೇತನ್ ಎಂಬವರು ನೀಡಿದ ದೂರಿನಲ್ಲಿ ರವೀಂದ್ರ ಎಂಬವರ ಮೇಲೆ ಪ್ರಕರಣ ದಾಖಲಾಗಿದ್ದು, ಜನವರಿ 18 ರಂದು ಸ್ನೇಹಿತರೊಬ್ಬರ ವಾಟ್ಸಪ್ ಸ್ಟೇಟಸ್ ನಲ್ಲಿ ರವೀಂದ್ರ ಎಂಬವರು ಕೊರಗಜ್ಜನ ವೇಷ ಹಾಕಿ ಅವಮಾನ ಎಸಗಿರುವ ವೀಡಿಯೋ ಹರಿದಾಡಿದೆ.

ಕೂಡಲೇ ಚೇತನ್ ರವೀಂದ್ರನನ್ನು ಪ್ರಶ್ನಿಸಿದಾಗ ಉದ್ರೇಕದ ಮಾತುಗಳನ್ನು ಆಡಿದಲ್ಲದೇ, ಮುಂದೆಯೂ ಈ ರೀತಿಯ ಹಲವು ವೀಡಿಯೋ ಮಾಡಿ ಹರಿಬಿಡುತ್ತೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಸದ್ಯ ಚೇತನ್ ಅವರು ನೀಡಿದ ದೂರಿನಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ರವೀಂದ್ರನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.