ಗಂಡನನ್ನು ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳಲು ಪ್ರಿಯಕರನೊಂದಿಗೆ ಮಹಿಳೆ ಪರಾರಿ!! ಇಪ್ಪತ್ತನೇ ದಿನಕ್ಕೆ ನಡೆಯಿತು ಇಬ್ಬರ ಶವಯಾತ್ರೆ

Share the Article

ಬೆಂಗಳೂರು: ಮದುವೆಯಾಗಿ ಗಂಡನೊಂದಿಗೆ ಸಂಸಾರ ನಡೆಸುತ್ತಿದ್ದ ಮಹಿಳೆಯೊಬ್ಬಳಿಗೆ ತನ್ನ ಸಂಬಂಧಿಕನೊಂದಿಗೆ ಪ್ರೀತಿ ಉಕ್ಕಿದ್ದು, ಬಳಿಕ ಕಟ್ಟಿಕೊಂಡ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಪರಾರಿಯಾದ ಮಹಿಳೆ ದುರಂತ ಅಂತ್ಯವನ್ನೇ ಕಂಡಿದ್ದು, ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ವಿವಾಹಿತ ಮಹಿಳೆಯನ್ನು ಜ್ಯೋತಿ(26) ಹಾಗೂ ಆಕೆಯ ಸಂಬಂಧಿ, ಪ್ರಿಯಕರ ಬಸವರಾಜ್(28) ಎಂದು ಗುರುತಿಸಲಾಗಿದೆ.

ವಿವಾಹಿತ ಮಹಿಳೆ ಜ್ಯೋತಿ ತನ್ನ ಪ್ರಿಯಕರನೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಕನಸಿನೊಂದಿಗೆ ಬೆಂಗಳೂರಿಗೆ ಬಂದಿದ್ದು, ತಾವಿಬ್ಬರು ಗಂಡ ಹೆಂಡತಿ ಎಂದು ಪಟ್ಟಣದಲ್ಲಿ ಬಾಡಿಗೆಗೆ ಮನೆಯೊಂದನ್ನು ಖರೀದಿಸಿದ್ದರು.

ಇವರಿಬ್ಬರ ಹೊಸ ಜೀವನಕ್ಕೆ ಅದೇನಾಯಿತೋ ಗೊತ್ತಿಲ್ಲ. ಗಂಡನನ್ನು ಬಿಟ್ಟು ಬಂದ 20 ನೇ ದಿನಕ್ಕೆ ಮಹಿಳೆ ಮತ್ತು ಆಕೆಯ ಪ್ರಿಯಕರ ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದು, ಮನೆಯಲ್ಲಿ ದುರ್ವಾಸನೆ ಬೀರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಬಂದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

Leave A Reply