ಬಂಟ್ವಾಳ:ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Share the Article

ಬಂಟ್ವಾಳ: ನೇತ್ರಾವತಿ ಸೇತುವೆಯಿಂದ ವ್ಯಕ್ತಿಯೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಮೃತ ವ್ಯಕ್ತಿಯನ್ನು ಕಾರಾಜೆ ನಿವಾಸಿ ಜಲೀಲ್ (55) ಎಂದು ಗುರುತಿಸಲಾಗಿದೆ.

ನೇತ್ರಾವತಿ ಸೇತುವೆಯಲ್ಲಿ ಬೈಕ್,ಚಪ್ಪಲಿ ಹಾಗೂ ಮೊಬೈಲ್ ಇಟ್ಟು ಯಾರು ಇಲ್ಲದ ಬಗ್ಗೆ ಸಂಶಯಗೊಂಡ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಲು
ಆರಂಭಿಸಿದ್ದು,ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು
ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಮೊಬೈಲ್ ಬಗ್ಗೆ ಮಾಹಿತಿ ಪಡೆದು
ವಿಚಾರಿಸಿದಾಗ ಕಾರಾಜೆ ನಿವಾಸಿ ಜಲೀಲ್ ಎಂದು
ಗುರುತು ಪತ್ತೆಯಾಗಿತ್ತು. ಆದರೆ ತಡ ರಾತ್ರಿವರೆಗೂ ವ್ಯಕ್ತಿಯು ಪತ್ತೆಯಾಗಿರಲಿಲ್ಲ. ಇಂದು
ಮುಂಜಾನೆಯಿಂದ ಸ್ಥಳೀಯ ಈಜುಗಾರ ಸತ್ತಾರ್
ಹಾಗೂ ಮೊಹಮ್ಮದ್ ಅವರು ನದಿಯಲ್ಲಿ ಈಜಾಡಿ
ಹುಡುಕಿದಾಗ ನದಿಯಲ್ಲಿ ಶವ ಪತ್ತೆಯಾಗಿದೆ.

ಆದರೆ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ
ತಿಳಿದುಬಂದಿಲ್ಲ.ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಬಂಟ್ವಾಳ ನಗರ
ಪೋಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ
ದಾಖಲಾಗಿದೆ.

Leave A Reply