ಕಾಣಿಯೂರು : ರಕ್ತದಾನ ಶಿಬಿರ
ಕಾಣಿಯೂರು : ನಮ್ಮಲ್ಲಿರುವ ರಕ್ತವನ್ನು ದಾನ ಮಾಡಿದಾಗ ನಮ್ಮಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ನಾವು ಆರೋಗ್ಯವಂತರಾಗಿ ಇನ್ನೊಂದು ಜೀವದ ಉಳಿವಿಗೆ ಕಾರಣಿಭೂತರಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ನಾವೆಲ್ಲ ತೊಡಗಿಸಿಕೊಂಡು ಸಾರ್ಥಕ ಜೀವನ ನಡೆಸೋಣ ಮತ್ತು ಇಂಥ ರಕ್ತದಾನ ಶಿಬಿರಗಳ ಮೂಲಕ ಜನರಿಗೆ ರಕ್ತದಾನದ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ನಡೆಯಬೇಕು ಎಂದು ಕಾರ್ಯಕ್ರಮದಲ್ಲಿ 58ನೇ ಬಾರಿ ರಕ್ತದಾನ ಮಾಡಿ ಇತರರಿಗೆ ಪ್ರೇರಣಾದಾಯಕರಾದ ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ ಹೇಳಿದರು. ಅವರು ಗೆಳೆಯರ ಬಳಗ (ರಿ) ಕೊಡಿಮಾರು ಅಬೀರ ಮತ್ತು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಕುದ್ಮಾರು, ಬೆಳಂದೂರು, ಕಾಣಿಯೂರು ಚಾರ್ವಾಕ, ಪುಣ್ಚತ್ತಾರು ಇವುಗಳ ಜಂಟಿ ಆಶ್ರಯದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಮಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ವಿಶ್ವ ಹಿಂದೂ ಪರಿಷತ್ ಇದರ ಸತ್ಯ ನಾರಾಯಣ ಭಟ್ ಚಾರ್ವಾಕ, ಕೊಡಿಮಾರು ದೈವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ರಂಜಿತ್ ಹೊಸೊಕ್ಲು ವಹಿಸಿದ್ದರು. ಗೆಳೆಯರ ಬಳಗದ ಗೌರವ ಸಲಹೆಗಾರರಾದ ಜಯಂತ ಅಬೀರ ಸ್ವಾಗತಿಸಿ ಚಂದ್ರಶೇಖರ್ ಮುಂಡಾಳ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಅಗಳಿ, ಪ್ರಮೋದ್ ನೀರಜರಿ ಸಹಕರಿಸಿದರು. ನಂತರ ನಡೆದ ಶಿಬಿರದಲ್ಲಿ ಗೆಳೆಯರ ಬಳಗ ಕೊಡಿಮಾರು ಮತ್ತು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳದ ವತಿಯಿಂದ ರಕ್ತದಾನ ನಡೆಯಿತು.