ಪುತ್ತೂರು : ಫೋನ್ ಕರೆ ಮಾಡಿ ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಹಣ ದೋಚುತ್ತಿದ್ದ ಯುವಕನ ಬಂಧನ | ಸಂಪ್ಯ ಪೊಲೀಸರ ಯಶಸ್ವಿ ಕಾರ್ಯಾಚರಣೆ

Share the Article

ಪುತ್ತೂರು: ಪೋನ್ ಕರೆ ಮಾಡಿ ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಎಟಿಎಂ ನಿಂದ ನಗದು ದೋಚುವುದು ಸೇರಿದಂತೆ ಹಣ ವಂಚನೆ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಮೂಲಕ ಹೊರ ಬಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಕಳೆದ 2 ವರ್ಷಗಳಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ ಉಡುಪಿ ಮೂಲದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಹೊಗೆ ಸೊಪ್ಪಿನ ಕೂಡ್ಲು ನಿವಾಸಿ ಆದರ್ಶ ಅಲಿಯಾಸ್ ಜೀವನ್ ಬಂಧಿತ ಆರೋಪಿ, ಆರೋಪಿ ಮಹಿಳೆಯರಿಗೆ ಕರೆ ಮಾಡಿ ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಎಟಿಎಮ್ ಮಾಹಿತಿ ಪಡೆದು ಹಣ ವಂಚನೆ ಮಾಡುತ್ತಿದ್ದರು.

2019 ರಲ್ಲಿ ಬಲ್ನಾಡಿನ ಮಹಿಳೆಯೊಬ್ಬರಿಗೆ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.

ಬಳಿಕ ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಳಿಕ ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗದೆ ನ್ಯಾಯಾಲಯ ಆರೋಪಿಗೆ ವಾರಂಟ್ ಜಾರಿ ಮಾಡಿತ್ತು.

ಪೊಲೀಸರು ಆರೋಪಿಯನ್ನು ಜ.16 ರಂದು ಉಡುಪಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಎಸ್ಪಿ ಋಷಿಕೇಶ್ ಭಗವಾನ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾ ಉಪನೀರಿಕ್ಷಕ ಉದಯ ರವಿ ಮತ್ತು ಅಮಿನ್ ಸಾಬ್‌ಅತ್ತಾರ್ ರವರ ಸಲಹೆಯಂತೆ ಪುತ್ತೂರು ಗ್ರಾಮಾಂತರ ಠಾಣೆಯ ಹೆಡ್ ಕಾನ್ ಸ್ಟೇಬಲ್ ಧರ್ಮಪಾಲ, ಕಾನ್ ಸ್ಟೇಬಲ್ ಗಳಾದ ಶಿವಾನಂದ ಕೆ, ಹರ್ಷಿತ್ ರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆ, ಉಡುಪಿ ಜಿಲ್ಲೆಯ ಹೆಬ್ರಿ, ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲೂ ಹಣ ವಂಚನೆ ಪ್ರಕರಣ ದಾಖಲಾಗಿತ್ತು.

Leave A Reply