ಬೆಂಗಳೂರಿನಲ್ಲೊಂದು ಭೀಕರ ದುರಂತ : ತಾಯಿ ಮಗಳು ಉಸಿರುಗಟ್ಟಿ ಸಾವು
ಬೆಂಗಳೂರು : ತಾಯಿ ಮಗಳು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ನಡೆದಿದೆ.
ಸ್ನಾನಕ್ಕೆಂದು ಸ್ನಾನದ ಕೋಣೆಗೆ ಹೋದ ಮಗಳು , ತಾಯಿ ಇಬ್ಬರೂ ಸಾವಿನ ಸೇರಿದ್ದಾರೆ.
ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತಾಯಿ ಮಂಗಳ ( 35) ಮಗಳು ಗೌತಮಿ ( 7) ಮೃತಪಟ್ಟಿದ್ದಾರೆ.
ಮನೆಯ ಮಾಲೀಕರಾದ ಗಾಯತ್ರಿ ಎಂಬುವರು ಮನೆ ಬಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಪತಿ ನರಸಿಂಹಮೂರ್ತಿ ಕೆಲಸಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.
15 ವರ್ಷದ ಹಿಂದೆ ರಾಮನಗರದಿಂದ ಬಂದು ಬೆಂಗಳೂರಿನಲ್ಲಿ ವಾಸವಿದ್ದ ಕುಟುಂಬ ದುರಂತ ಅಂತ್ಯ ಕಂಡಿದೆ
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.