ಇಂದು ನಾಳೆ ವೀಕೆಂಡ್ ಕರ್ಫ್ಯೂ | ಅನಗತ್ಯ ಓಡಾಟಕ್ಕೆ ಇಲ್ಲ ಅವಕಾಶ

Share the Article

ಮಂಗಳೂರು : ಒಮೈಕ್ರಾನ್ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಪ್ಯೂ ಶುಕ್ರವಾರ (ಜ.14) ರಾತ್ರಿ 10ರಿಂದ ಆರಂಭಗೊಳ್ಳಲಿದ್ದು, ಸೋಮವಾರ (ಜ.17) ಮುಂಜಾನೆ 5ರವರೆಗೆ ಮುಂದುವರಿಯಲಿದೆ ಎಂದು ದ.ಕ.ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವೀಕೆಂಡ್ ಕರ್ಪ್ಯೂ ಅವಧಿಯಲ್ಲಿ (ಶನಿವಾರ ಮತ್ತು ರವಿವಾರ) ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಒಳಾಂಗಣದಲ್ಲಿ 100 ಮತ್ತು ಹೊರಾಂಗಣದಲ್ಲಿ 200 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.

ಪೂರ್ವನಿಗದಿತ ಹರಕೆ ಯಕ್ಷಗಾನ, ಯಕ್ಷಗಾನ, ದೇವ- ದೈವಾರಾಧನೆಯನ್ನು 100 ಮಂದಿಗೆ ಸೀಮಿತಗೊಳಿಸಿ ಕಾರ್ಯಕ್ರಮವಾಗಿ ನಡೆಸಬಹುದಾಗಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದ್ದು, ಇತರ ಯಾವುದೇ ಕಾರ್ಯಕ್ರಮಗಳಿಗೆ ರಿಯಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Leave A Reply

Your email address will not be published.