ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸುವಸ್ತು ಕನಕಾಭಿಷೇಕ
ಪುತ್ತೂರು: ಮಕರ ಸಂಕ್ರಮಣದ ಅಂಗವಾಗಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.14ರಂದು ವಿಶೇಷ ಬಲಿ ಉತ್ಸವ ನಡೆಯಿತು.
ಸಂಜೆ ಶ್ರೀ ದೇವರ ಉತ್ಸವ, ವಾದ್ಯ, ಚೆಂಡೆ ಉತ್ಸವ ಬಳಿಕ ಶ್ರೀ ಉಳ್ಳಾಲ್ತಿ ನಡೆಯಲ್ಲಿ ಶ್ರೀ ದೇವರ ಉತ್ಸವ ಮೂರ್ತಿಗೆ ಸುವಸ್ತು ಕನಕಾಭಿಷೇಕ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಶ್ರೀ ದೇವರ ಉತ್ಸವ ಮೂರ್ತಿಗೆ ಕನಕಾಭಿಷೇಕ ಚಿಮ್ಮಿಸಿದರು. ಬಳಿಕ ವಸಂತ ಕಟ್ಟೆಯಲ್ಲಿ ಭಕ್ತರಿಗೆ ಕನಕಾಭಿಷೇಕದ ಪ್ರಸಾದ ವಿತರಣೆ ಮಾಡಲಾಯಿತು.
ಪ್ರಧಾನ ಅರ್ಚಕ ವೇ.ಮೂ.ವಿ.ಎಸ್.ಭಟ್ ವೈದಿಕ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ, ರಾಮಚಂದ್ರ ಕಾಮತ್ ರವೀಂದ್ರನಾಥ ರೈ ಬಳ್ಳಮಜಲು, ಐತ್ತಪ್ಪ ನಾಯ್ಕ, ರಾಮದಾಸ್ ಗೌಡ, ಶೇಖರ್ ನಾರಾವಿ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಮತ್ತಿತರರು ಉಪಸ್ಥಿತರಿದ್ದರು.