ಮಕರ ಸಂಕ್ರಾಂತಿಯ ದಿನ ಊರಿಗೆ ಬಂದಿದ್ದ ಮಹಿಳೆಯ ಕೊಲೆಗೆ ಯತ್ನಿಸಿದ ಮಾಜಿ ಪ್ರಿಯಕರ!! ಅನೈತಿಕ ಸಂಬಂಧ ತೊರೆದು ಗಂಡನೊಂದಿಗೆ ತೆರಳಿದ್ದರಿಂದ ಕೆರಳಿದ ಪ್ರಿಯಕರ ಬಿಯರ್ ಬಾಟಲ್ ನಿಂದ ಚುಚ್ಚಿದ

Share the Article

ಹಬ್ಬದ ದಿನ ಗ್ರಾಮದ ದೇವಾಲಯಕ್ಕೆ ತನ್ನ ಮಗಳ ಜೊತೆ ಬಂದಿದ್ದ ಮಹಿಳೆಯೋರ್ವಳಿಗೆ ಆಕೆಯ ಮಾಜಿ ಪ್ರಿಯಕರ ಕಾಡಿದ್ದು, ಬಿಯರ್ ಬಾಟಲ್ ನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಎಂಬಲ್ಲಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು ವೆಂಕಪ್ಪ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮದುವೆಯಾಗಿ ಮೂರು ಮಕ್ಕಳಿರುವ ದಾಳಿಗೊಳಗಾದ ಮಹಿಳೆಗೆ ವೆಂಕಪ್ಪನೊಂದಿಗೆ ಅನೈತಿಕ ಸಂಬಂಧವಿದ್ದು,ಮುಂದಕ್ಕೆ ಯಾವುದೇ ಸಂಬಂಧ ಬೇಡವೆಂದು ಕೆಲ ಸಮಯದಿಂದ ಗಂಡನೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು.

ಆದರೆ ಮಕರ ಸಂಕ್ರಾಂತಿಯ ದಿನ ಊರಿಗೆ ಬಂದಿದ್ದ ಮಹಿಳೆಗೆ ಮಾಜಿ ಪ್ರಿಯಕರ ವೆಂಕಪ್ಪ ಎದುರಾಗಿದ್ದು, ಹಣಕ್ಕಾಗಿ ಪೀಡಿಸಿದ್ದಾನೆ ಎನ್ನಲಾಗಿದೆ.ಮಹಿಳೆ ಹಣ ಕೊಡಲು ಒಪ್ಪದಿದ್ದಾಗ ಬಿಯರ್ ಬಾಟಲ್ ನಿಂದ ಚುಚ್ಚಿ, ಇನ್ನೇನು ಆಕೆಯ ಮೇಲೆ ಕಲ್ಲು ಎತ್ತಿ ಹಾಕಬೇಕು ಎನ್ನುವಷ್ಟರಲ್ಲಿ ಸ್ಥಳೀಯರು ಆಗಮಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಇತ್ತ ಆಕೆಯೊಂದಿಗೆ ಬಂದಿದ್ದ ಮಗಳು ಚೀರಿಕೊಳ್ಳದೆ ಇರುತ್ತಿದ್ದರೆ, ಆರೋಪಿಯಾದ ವೆಂಕಪ್ಪ ಕೊಂದೇ ಬಿಡುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.