ಬಸ್ ಚಾಲಕನ ಹಠಾತ್ ಅನಾರೋಗ್ಯ | ಬಸ್ ಸ್ಟೇರಿಂಗ್ ಕೈಗೆ ತೆಗೆದುಕೊಂಡು 10 ಕಿ.ಮೀ. ಬಸ್ ಚಲಾಯಿಸಿ ಚಾಲಕನ ಜೀವ ಉಳಿಸಿದ ಧೀರ ಮಹಿಳೆ

ಪುಣೆ : ಬಸ್ ಚಾಲಕ ಬಸ್ ಡ್ರೈವ್ ಮಾಡುತ್ತಿರುವಾಗಲೇ ಹಠಾತ್ ಆಗಿ ಅನಾರೋಗ್ಯಕ್ಕೆ ತುತ್ತಾದಾಗ ಪರಿಸ್ಥಿತಿಯನ್ನು ತಿಳಿದು ಮಹಿಳೆಯೊಬ್ಬರು ಸ್ಟೇರಿಂಗ್ ಹಿಡಿದು ಸುಮಾರು 10 ಕಿ.ಮೀ ದೂರ ಬಸ್ ಚಲಾಯಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ ಈ ಮಹಿಳೆ.

Ad Widget

ಈ ಧೀರ ಮಹಿಳೆಯ ಹೆಸರೇ ಯೋಗಿತಾ ಧರ್ಮೇಂದ್ರ ಸತವ್. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . . Ad Widget . Ad Widget . Ad Widget

Ad Widget

Ad Widget
Ad Widget Ad Widget

ಪುಣೆಯ ವಾಘೋಲಿಯಿಂದ 22 ರಿಂದ 23 ಮಹಿಳೆಯರ ತಂಡ ಶಿರೂರು ತಾಲೂಕಿನ ಮೊರಚಿ ಚಿಂಚೋಳಿಯಲ್ಲಿ ಟ್ರಿಪ್ ಹೋಗಿದ್ದರು. ಮೊರಚಿ ಚಿಂಚೋಳಿಯಿಂದ ವಾಪಸ್ ಬರುವಾಗ ಚಾಲಕನ ಆರೋಗ್ಯ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಯೋಗಿತಾ ಬಸ್ ಕಮಾಂಡ್ ತೆಗೆದುಕೊಂಡಿದ್ದಾರೆ. ಹಾಗೂ ಈ ಮೂಲಕ ಚಾಲಕ ಹಾಗೂ ಎಲ್ಲಾ ಮಹಿಳೆಯರ ಪ್ರಾಣವನ್ನು ಉಳಿಸಿದ್ದಾರೆ. ಯೋಗಿತಾ ಅವರ ಈ ಧೈರ್ಯದ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಾಘೋಲಿ ಗ್ರಾಮದ ಮಾಜಿ ಸರಪಂಚರಾದ ಜಯಶ್ರೀ ಸತವ್ ಪಾಟೀಲ್ ಅವರು ತಮ್ಮ ಸಹೋದ್ಯೋಗಿ ಮತ್ತು ಪಿಕ್ನಿಕ್ ಆಯೋಜಕಿ ಆಶಾ ವಾಘಮಾರೆ ಅವರೊಂದಿಗೆ ಯೋಗಿತಾ ಸಾತವ್ ಅವರ ಮನೆಗೆ ತಲುಪಿ ಗೌರವಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: