ವಿಟ್ಲ: ಸಾಲೆತ್ತೂರಿನಲ್ಲಿ ನಡೆದ ಕೊರಗಜ್ಜನ ಅವಹೇಳನ ಪ್ರಕರಣದ ಹಿನ್ನೆಲೆ!! ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಹಿಂದೂ ಯುವಕನ ಮೇಲೆ ಬಿತ್ತು ಎಫ್.ಐ.ಆರ್

Share the Article

ವಿಟ್ಲ:ಕೆಲ ದಿನಗಳ ಹಿಂದೆ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾದ ಅನ್ಯಧರ್ಮದ ಮದುವೆ ಮನೆಯಲ್ಲಿ ಮದುಮಗನೋರ್ವ ಕೊರಗಜ್ಜನ ವೇಷ ಅಪಹಾಸ್ಯ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊರ್ವನ ಮೇಲೆ ಪ್ರಕರಣ ದಾಖಲಾಗಿದೆ.

ಫೆಡರಲ್ ಬ್ಯಾಂಕ್ ಉದ್ಯೋಗಿಯಾಗಿರುವ ವಿಷ್ಣು ಪ್ರಸಾದ್ ನಿಡ್ಡಾಜೆ ಎಂಬವರ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, ಫೇಸ್ ಬುಕ್ ನಲ್ಲಿ ಮಂಗಳೂರಿನಲ್ಲೂ ಗುಜರಾತ್ ಮಾದರಿಯಲ್ಲಿ ನರಮೇಧ ನಡೆಸಬೇಕು, ಹಾಗಾದರೆ ಮಾತ್ರ ಬುದ್ಧಿ ಬರುತ್ತದೆ ಎಂಬ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಪಿ.ಎಫ್.ಐ ಸಂಘಟನೆ ವಿಟ್ಲ ಠಾಣೆಗೆ ದೂರು ನೀಡಿದ್ದ ಬೆನ್ನಲ್ಲೇ ಪ್ರಕರಣ ದಾಖಲಾಗಿದೆ.

Leave A Reply