ರಾಜ್ಯಕ್ಕೆ ಫಿಕ್ಸ್ ಆಗುತ್ತಾ ಲಾಕ್ ಡೌನ್ !?? ಆರೋಗ್ಯ ಸಚಿವ ಕೆ. ಸುಧಾಕರ್ ಫೆಬ್ರವರಿ ತಿಂಗಳ ಬಗ್ಗೆ ಬಿಚ್ಚಿಟ್ಟ ಮಾಹಿತಿ ಏನು!?
ರಾಜ್ಯವನ್ನು ಲಾಕ್ ಡೌನ್ ನತ್ತ ತಳ್ಳಿ ಯಾವ ಪ್ರಯೋಜನವೂ ಇಲ್ಲ, ಕೊರೋನ ನಿಯಂತ್ರಿಸಲು ಲಾಕ್ ಡೌನ್ ಒಂದೇ ಸೂಕ್ತವಲ್ಲ ಎಂದು ಅರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು,ಕೊರೋನ ಅತೀ ವೇಗವಾಗಿ ಹರಡುವುದರಿಂದ ಆಯಾ ಜಿಲ್ಲೆಗಳ ಡಿಸಿ ಗಳನ್ನು ಸೇರಿಸಿ ಸಭೆ ನಡೆಸಲಾಗುತ್ತಿದೆ.ಓಮಿಕ್ರಾನ್ ತಡೆಗೆ ಎಚ್ಚರಿಕೆಯಿಂದಿದ್ದು,ನಿತ್ಯವೂ ವರದಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ನಡೆಸುತ್ತಿವೆ ಎಂದಿದ್ದಾರೆ.
ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಓಮಿಕ್ರಾನ್ ಹೆಚ್ಚಾಗುವ ಸಂಭವಿವಿದ್ದು,ಫೆಬ್ರವರಿ 3-4ನೇ ವಾರದವರೆಗೆ ಎಚ್ಚರಿಕೆಯಿಂದಿರಬೇಕಾಗಿದ್ದು, ಅಲ್ಲಿಯ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದರು.