ಈ ಊರಲ್ಲಿ ಬಯಲಾಯಿತೊಂದು ಬ್ರಹ್ಮಾಂಡ ರಹಸ್ಯ | ಬರೋಬ್ಬರಿ 800 ಮಕ್ಕಳ ಹುಟ್ಟಿಗೆ ಕಾರಣನಾದ ಹಾಲು ಮಾರುವ ಯುವಕ !!

Share the Article

ಇದೊಂದು ಯಾರೂ ಊಹಿಸಲಾಗದ ಘಟನೆ. ಆ ಊರಲ್ಲೊಂದು ಬ್ರಹ್ಮಾಂಡ ರಹಸ್ಯವೇ ಹೊರಬಿದ್ದಿದೆ. ಆ ಊರಿನ ಜನರೆಲ್ಲರೂ ಬೆಕ್ಕಸ ಬೆರಗಾಗುವಂತಹ ಘಟನೆಯ ಸೂತ್ರಧಾರನೇ ಆ ಬಡಾವಣೆಯಲ್ಲಿ ಹಾಲು ಮಾರುವ ಯುವಕ. ಹಾಗಾದ್ರೆ ಆತನ ಕಥೆ ಏನು ಅಂತ ಯೋಚಿಸುತ್ತಿದ್ದೀರಾ… ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್ ಸ್ಟೋರಿ.

ಅದು ದಕ್ಷಿಣ ಕ್ಯಾಲಿಫೋರ್ನಿಯಾದ ಒಂದು ಸುಂದರ ಬಡಾವಣೆ. ಅಲ್ಲಿದ್ದ ಹೆಚ್ಚಿನ ಗಂಡಸರು ಸೇನೆಯಲ್ಲಿ ಯೋಧರಾಗಿದ್ದರು. ಸ್ಯಾಂಡಿಯಾಗೋ ಬಡಾವಣೆಗೆ ದಿನಂಪ್ರತಿ ಸುಂದರ ಯುವಕನೊಬ್ಬ ಹಾಲು ಪೂರೈಸುತ್ತಿದ್ದ. ಪ್ರತಿ ಮನೆ ಮನೆಗೆ ಹೋಗಿ ಹಾಲು ವಿತರಿಸುತ್ತಿದ್ದ. ಅಂದಹಾಗೆ ಇದು 1950- 60ರ ದಶಕದ ಘಟನೆ.

ಅಲ್ಲಿನ ಮಹಿಳೆಯರು ಹಾಲು ಮಾರಾಟದ ಯುವಕ ರಾಂಡಲ್ ಜೆಫ್ರೀಸ್ ಬರುವುದನ್ನೇ ಕಾಯುತ್ತಿದ್ದರು. ಎಲ್ಲರಿಗೂ ಅವನೆಂದರೆ ಅಚ್ಚು ಮೆಚ್ಚು. ಕೆಲವರು ಅವನಿಗೆ ತಿಂಡಿ ಕೊಡುತ್ತಿದ್ದರು. ಹೀಗೆ ಹಾಲು ಮಾರಾಟ ಮಾಡುತ್ತಾ ಯುವಕ, ಅಲ್ಲಿನ ಮಹಿಳೆಯರ ಮನಗೆದ್ದು ಅವರ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಹೀಗೆ ಸಂಬಂಧ ಹೊಂದಿ ಬರೋಬ್ಬರಿ 800 ಮಕ್ಕಳ ಹುಟ್ಟಿಗೆ ಕಾರಣನಾಗಿದ್ದಾನೆ ಎಂಬುದು ಇದೀಗ ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿದೆ.

ಕೆಲವು ಮಕ್ಕಳ ಹುಟ್ಟಿನ ಬಗ್ಗೆ ಸಂಶಯ ತಲೆದೋರಿದ ಹಿನ್ನೆಲೆಯಲ್ಲಿ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಇದರ ಭಾಗವಾಗಿ ಹಾಲು ಮಾರಾಟದ ಯುವಕ ರಾಂಡಲ್ ಜೆಫ್ರೀಸ್ ನನ್ನು ಕೂಡ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಇದೀಗ ವರದಿ ಕೈ ಸೇರಿದ್ದು, ಬ್ರಹ್ಮಾಂಡ ರಹಸ್ಯ ಬಯಲಾಗಿದೆ. ಬರೋಬ್ಬರಿ 800 ಮಕ್ಕಳ ತಂದೆ ಯಾರೆಂಬ ಸತ್ಯ ಇಡೀ ಬಡಾವಣೆಯ ಗಂಡಸರನ್ನು ತಬ್ಬಿಬ್ಬು ಮಾಡಿದ್ದಂತೂ ನಿಜವೇ.

Leave A Reply