ಮಕರಸಂಕ್ರಮಣ ವಿಶೇಷತೆ : ಶಬರಿಮಲೆಯ 18 ಮೆಟ್ಟಿಲುಗಳ ಸ್ವಾರಸ್ಯಕರ ಮಾಹಿತಿ

ಕೇರಳದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಮಕರ ಜ್ಯೋತಿಯಂದು ಲಕ್ಷಾಂತರ ಜನರು ಭೇಟಿ ನೀಡುತ್ತಾರೆ.ಎಷ್ಟು ಶ್ರದ್ಧಾ ಭಕ್ತಿಯಿಂದ ಅಯ್ಯಪ್ಪನಿಗೆ ಪೂಜೆ ಸಲ್ಲಿಸುತ್ತಾರೋ ಆ ನಿಟ್ಟಿನಲ್ಲಿ ಅವರ ಕಷ್ಟವೆಲ್ಲ ಪರಿಹಾರ ಆಗುತ್ತದೆ ಎಂಬ ನಂಬಿಕೆ.

ಈ ಪುಣ್ಯಕ್ಷೇತ್ರಕ್ಕೆ ಹೋಗಲು 41 ದಿನಗಳ ಕಠಿಣ ವ್ರತವನ್ನು ಅನುಸರಿಸಬೇಕು. ಬ್ರಹ್ಮಚರ್ಯೆ, ಸಾತ್ವಿಕ ಆಹಾರ, ಮಾಂಸ – ಮಧ್ಯ, ಧೂಮಪಾನ ಇವುಗಳಿಂದ ದೂರವೇ ಇರಬೇಕು.ಈ ವ್ರತದ ಸಮಯದಲ್ಲಿ ಅಯ್ಯಪ್ಪ ಭಕ್ತರು ಕಾಲಿಗೆ ಚಪ್ಪಲಿ ಕೂಡಾ ಧರಿಸುವುದಿಲ್ಲ‌. ಕೊರಳಿಗೆ ರುದ್ರಾಕ್ಷಿ ಮಾಲೆಗಳನ್ನು ಧರಿಸುತ್ತಾ, ಕಪ್ಪು ಅಥವಾ ಖಾವಿ ಪಂಚೆ, ಕುತ್ತಿಗೆಗೆ ಒಂದು ಟವಲ್ ಹಾಕಿಕೊಂಡು ಕಠಿಣ ವ್ರತ ಕ್ರಮಗಳನ್ನು ಮಾಡುತ್ತಾರೆ. ಮಾಲೆ ಹಾಕಿದವರನ್ನು ಯಾರೂ ಕೂಡಾ ಹೆಸರಿಡಿದು ಕರೆಯುವುದಿಲ್ಲ‌. ಅವರನ್ನು ಗೌರವದಿಂದ ಸ್ವಾಮಿಯೆಂದೇ ಸಂಭೋಧಿಸುತ್ತಾರೆ.ಅಯ್ಯಪ್ಪ ಸ್ವಾಮಿಯ ಮೆಟ್ಟಿಲುಗಳನ್ನು ಏರಲು 10 ವರ್ಷಕ್ಕಿಂತ ಚಿಕ್ಕ ಪ್ರಾಯದ ಹುಡುಗಿಯರಿಗೆ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರಿಗಷ್ಟೇ ಅವಕಾಶ ಇದೆ.

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ತಣ್ಣೀರು ಸ್ನಾನ ಮಾಡಿ ಅಯ್ಯಪ್ಪನ ಭಜನೆಗಳನ್ನು ಹಾಡುತ್ತಾ ಸದಾ ಅಯ್ಯಪ್ಪನ ಧ್ಯಾನದಲ್ಲಿಯೇ ಇರುತ್ತಾರೆ ಈ ಅಯ್ಯಪ್ಪನ ಭಕ್ತರು. 41 ನೆಯ ದಿನ ಇರುಮುಡಿ ಹೊತ್ತುಕೊಂಡು ಅಯ್ಯಪ್ಪನ ದರ್ಶನಕ್ಕೆ ಬರುತ್ತಾರೆ. ಪಂಪಾ ನದಿಯಲ್ಲಿ ಸ್ನಾನ ಮಾಡಿ, ಶಬರಿಮಲೆಯನ್ನು ಏರಿ, 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುತ್ತಾರೆ.

ಈ 18 ಮೆಟ್ಟಿಲುಗಳ ವಿಶೇಷತೆ ಇಲ್ಲಿದೆ ನೋಡಿ :

ಮೊದಲ ಐದು ಮೆಟ್ಟಿಲು ಪಂಚೇಂದ್ರಿಯಗಳ ಕೆಲಸದ ಬಗ್ಗೆ ತಿಳಿಸುತ್ತದೆ:

  1. ಕಣ್ಣು : ಒಳ್ಳೆಯದನ್ನು ನೋಡಬೇಕು
  2. ಕಿವಿ : ಒಳ್ಳೆಯದನ್ನು ಕೇಳಲು
  3. ಮೂಗು : ತಾಜಾ ಗಾಳಿಯನ್ನು ಉಸಿರಾಡಬೇಕು
  4. ನಾಲಗೆ : ಒಳ್ಳೆಯದರ ಕುರಿತು ಮಾತನಾಡಬೇಕು.
  5. ತ್ವಚೆ : ಜಪ ಮಾಲೆಯ ಸ್ಪರ್ಶ ಮಾತ್ರ ದೇಹವನ್ನು ತಾಗಬೇಕು.

ಮುಂದಿನ 8 ಮೆಟ್ಟಿಲುಗಳು ಅಷ್ಟರಾಗಗಳನ್ನು ಸೂಚಿಸುತ್ತದೆ:

  1. ಕಾಮ, 7.ಕ್ರೋಧ, 8.ಲೋಭ, 9. ಮೋಹ, 10. ಮಧ, 11. ಮತ್ಸರ, 12. ಅಸೂಯೆ, 13. ಕುತಂತ್ರ

ಮುಂದಿನ 3 ಮೆಟ್ಟಿಲುಗಳು ಮನುಷ್ಯನಲ್ಲಿರುವ ತ್ರಿಗುಣಗಳ ಬಗ್ಗೆ ತಿಳಿಸುತ್ತದೆ:

14.ಉದಾಸೀನ ಇರಬಾರದು 15. ವ್ಯಕ್ತಿ ಲವಲವಿಕೆಯಿಂದ ಚಟುವಟಿಕೆಯಿಂದ ಇರಬೇಕು, 16. ಅಹಂಕಾರ ಇರಬಾರದು.

ಕೊನೆಯ ಎರಡು ಮೆಟ್ಟಿಲು:

  1. ವಿದ್ಯೆ ಹಾಗೂ 18. ಅವಿದ್ಯೆಯ ಕುರಿತು ಹೇಳುತ್ತದೆ.
Leave A Reply

Your email address will not be published.