ಅಂತರ ಕಾಲೇಜು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಪುತ್ತೂರು ವಿವೇಕಾನಂದ ಪ.ಪೂ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಪುತ್ತೂರು: ಕಲ್ಲಡ್ಕದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಆಝಾದಿ ಪರ್ವ ಅಂತರ ಕಾಲೇಜು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ದೇಶ ಭಕ್ತಿ ಗೀತೆ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಮಾನವಿ,ಕೃತಿಕ,ಶ್ರೀಲಕ್ಷ್ಮೀ,ಪೃಥ್ವಿ,ಸಿರಿ,ಹರ್ಷಿತ ರವರ ತಂಡಕ್ಕೆ ಪ್ರಥಮ ಬಹುಮಾನ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ದೀಕ್ಷ ಶರ್ಮ,ಸನ್ಮಯ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಶ್ರೀದೇವಿ,ಹೇಮ ಹೆಚ್.ಎಸ್,ಪ್ರಥಮ ವಾಣಿಜ್ಯ ವಿಭಾಗದ ಶರಣ್ಯ,ದೀಪಶ್ರೀ ರವರ ತಂಡವು ತೃತೀಯ ಬಹುಮಾನವನ್ನು ಗಳಿಸಿದೆ.
ಐಸ್ ಬ್ರೇಕರ್ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಸುದೇವ ತಿಲಕ್,ಅಜಿತ್ ಲಾಲ್,ಶ್ರೇಯ,ಪ್ರಜ್ಞ,ಅಕ್ಷತ,ಮಧು ರವರ ತಂಡ ದ್ವಿತೀಯ ಬಹುಮಾನವನ್ನು ಗಳಿಸಿದೆ.
ಸ್ಪೋಟ್ ಡಾನ್ಸ್ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಸುಶ್ಮಿತ ಪ್ರಥಮ ಬಹುಮಾನವನ್ನು ಗಳಿಸಿದ್ದಾರೆ.
ಜಾಹೀರಾತು ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವೈಷ್ಣವಿ,ದೇವಯಾನಿ,ಕೃತಿಕ, ಮೋಕ್ಷ,ದ್ವಿತೀಯ ವಾಣಿಜ್ಯ ವಿಭಾಗದ ವೃಂದ,ಸುಶ್ರಿತ್ ತಂಡವು ಪ್ರಥಮ ಬಹುಮಾನವನ್ನು ಗಳಿಸಿದೆ.
ಕ್ರೀಡೆಯಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಗಣೇಶ್ ಪ್ರಸಾದ್, ಪ್ರಥಮ ಪಿಯುಸಿ ಕಲಾ ವಿಭಾಗದ ಸುಬ್ರಮಣ್ಯ,ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಸಾತ್ವಿಕ್,ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪವನ,ಸಾತ್ವಿಕ್ ,ಯೊಗೇಶ್ ರವರವ ತಂಡವು ತೃತೀಯ ಬಹುಮಾನವನ್ನು ಗಳಿಸಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.