ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗರನ್ನು ಮದುವೆಯಾಗುವುದಿಲ್ಲ ಎಂದಿದ್ದ ಮುಸ್ಲಿಂ ನಟಿ ಇದೀಗ ಭಗವದ್ಗೀತೆ ಹಿಡಿದು ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ !! | ಅದಲ್ಲದೆ ಆಕೆ ಧರಿಸಿದ್ದ ಟೀ ಶರ್ಟ್ ನಲ್ಲಿ ಏನು ಬರೆದಿತ್ತು ಗೊತ್ತಾ??

ಇತ್ತೀಚೆಗೆ ನಾನು ಮುಸ್ಲಿಂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಈ ನಟಿ ಭಾರಿ ಚರ್ಚೆಗೆ ಒಳಗಾಗಿದ್ದರು. ಇದೀಗ ಅದೇ ನಟಿ ಏರ್ ಪೋರ್ಟ್ ನಲ್ಲಿ ಕೈಯಲ್ಲಿ ಭಗವದ್ಗೀತೆ ಹಿಡಿದು ಮತ್ತೊಮ್ಮೆ ನೆಟ್ಟಿಗರ ಗಮನಸೆಳೆದಿದ್ದಾರೆ.

Ad Widget

ಹೌದು, ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಉರ್ಫಿ ಜಾವೇದ್ ವಿಚಿತ್ರವಾದ ಬಟ್ಟೆಗಳನ್ನು ತೊಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುತ್ತಾರೆ. ಹಿಂದಿ ಧಾರಾವಾಹಿಗಳಲ್ಲಿ ಸಕ್ರಿಯರಾಗಿರುವ ಉರ್ಫಿ, ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

Ad Widget . . Ad Widget . Ad Widget .
Ad Widget

ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ, ಕೈಯಲ್ಲಿ ಭಗವದ್ಗೀತೆ ಹಿಡಿದಿದ್ದರು. ಹಾಗೇ ತಾವು ಧರಿಸಿದ್ದ ಟಿ-ಶರ್ಟ್ ಮೇಲೆ ‘ನಾನು ಜಾವೇದ್ ಅಖ್ತರ್ ಮೊಮ್ಮಗಳಲ್ಲ’ ಎಂದು ಬರೆಯಲಾಗಿತ್ತು. ಈ ಎರಡು ವಿಚಾರಗಳಿಂದ ಆಕೆ ನೆಟ್ಟಿಗರ ಗಮನ ಸೆಳೆದಿದ್ದಾರೆ. ಅದಲ್ಲದೆ, ಟಿ-ಶರ್ಟ್ ಬಗ್ಗೆ ಹೇಳಿಕೊಂಡಿರುವ ಅವರು, ನಾನು ಎಲ್ಲಿಗೆ ಹೋದರೂ ಕೂಡ ಜನ ನನ್ನ ನೀವು ಜಾವೇದ್ ಅಖ್ತರ್ ಅವರ ಮೊಮ್ಮಗಳಾ? ಎಂದು ಕೇಳುತ್ತಾರೆ. ನಾನು ಅವರ ಮೊಮ್ಮಗಳು ಅಲ್ಲ ಎನ್ನುವುದು ಇಡೀ ಪ್ರಪಂಚಕ್ಕೆ ಗೊತ್ತಾಗಲಿ ಎಂದು ಅವರು ಈ ಟಿ-ಶರ್ಟ್ ಧರಿಸಿರುವೆ ಎಂದು ಹೇಳಿದ್ದಾರೆ.

Ad Widget
Ad Widget Ad Widget

ಬಾಲಿವುಡ್ ಚಿತ್ರ ಚಿತ್ರಸಾಹಿತಿ ಜಾವೇದ್ ಅಖ್ತರ್ ಮತ್ತು ಉರ್ಫಿ ಜಾವೇದ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಹೆಸರಿನಲ್ಲಿ ‘ಜಾವೇದ್’ ಇರುವ ಕಾರಣಕ್ಕೆ ಉರ್ಫಿಯನ್ನು ಜಾವೇದ್ ಅಖ್ತರ್ ಅವರ ಮೊಮ್ಮಗಳು ಎಂದು ಅನೇಕರು ಭಾವಿಸಿದ್ದಾರೆ.

ನಾನು ಮುಸ್ಲಿಂ ಧರ್ಮಕ್ಕೆ ಸೇರಿದ್ದರೂ ಆ ಧರ್ಮದ ಮೇಲೆ ನಂಬಿಕೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಹಾಗೆಯೇ ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ಕೂಡ ವಾದಿಸಿದ್ದರು. ಅದಲ್ಲದೆ ತಾವು ಭಗವದ್ಗೀತೆ ಓದುತ್ತಿರುವುದಾಗಿಯೂ ಹೇಳಿದ್ದರು. ಇದೀಗ ಅವರು ಭಗವದ್ಗೀತೆ ಹಿಡಿದುಕೊಂಡು ಓಡಾಡುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ ಬಳಿಕ ಅವರಿಗೆ ಧಾರವಾಹಿ ಹಾಗೂ ವೆಬ್‌ಸಿರೀಸ್‌ಗಳಲ್ಲಿ ಅವಕಾಶಗಳು ಸಿಕ್ಕಿವೆ. ಸದ್ಯ ಅವರು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಹಾಗೆಯೇ ಇದೀಗ ಹಿಂದೂ ಧರ್ಮದ ಪರ ಒಲವು ತೋರಿ ಟ್ರೋಲಿಗರ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆಯುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: