ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ತೀವ್ರ ಆಸಕ್ತಿಯ ಗಂಡನ ಹಲ್ಲು ಕಿತ್ತುಹಾಕುವಂತೆ ಕೋರ್ಟು ಹೇಳಿದ್ದು ಯಾಕೆ ಗೊತ್ತಾ ?ಕೋರ್ಟ್ ನ ಅಚ್ಚರಿಯ ತೀರ್ಪಿನ ಹಿಂದೆ ಇದೆ ಅದೊಂದು ಚುಚ್ಚುವ ಕಾರಣ !!
ಅಹಮದಾಬಾದ್ : ಪತ್ನಿಯೊಬ್ಬಳು ಪತಿಯ ಅಸ್ವಾಭಾವಿಕ ಲೈಂಗಿಕತೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಕುತೂಹಲದ ತೀರ್ಪೊಂದನ್ನು ನೀಡಿದೆ.
ಈ ರೀತಿಯ ಅಸ್ವಾಭಾವಿಕ ಲೈಂಗಿಕತೆಗೆ ಕೃತಕ ಹಲ್ಲನ್ನು ಗಂಡ ಬಳಸುತ್ತಿದ್ದರಿಂದ ಆ ಹಲ್ಲನ್ನು ಕೀಳುವಂತೆ ಕೋರ್ಟ್ ಹೇಳಿದೆ!
ಗುಜರಾತ್ ನ ದೊಡ್ಡ ಆಭರಣ ವ್ಯಾಪಾರಿಯೋರ್ವರ ಪತ್ನಿ ಕೋರ್ಟ್ ಮೊರೆ ಹೋಗಿದ್ದರು. ಈ ವ್ಯಾಪಾರಿಯ ಮೊದಲ ಪತ್ನಿ ಕೊರೊನಾ ಕಾರಣದಿಂದ ಮೃತಪಟ್ಟಿದ್ದರಿಂದ 67 ವರ್ಷ ವಯಸ್ಸಿನ ಈತ 40 ರ ಹರೆಯದವಳ ಜೊತೆ ಎರಡನೇ ವಿವಾಹವಾಗಿದ್ದ.
ಮದುವೆಯ ನಂತರ ಪತಿಗೆ ಲೈಂಗಿಕತೆಯಲ್ಲಿ ವಿಪರೀತ ಆಸಕ್ತಿಯಿದ್ದು, ಅಸ್ವಾಭಾವಿಕ ಲೈಂಗಿಕತೆಯನ್ನು ಬಯಸುತ್ತಿದ್ದ ಎಂದು ಹೆಂಡತಿಗೆ ತಿಳಿಯಿತು. ಅಷ್ಟೂ ಮಾತ್ರವಲ್ಲದೇ ಕೃತಕ ಹಲ್ಲುಗಳನ್ನು ಹಾಕಿಸಿಕೊಂಡಿದ್ದ ಈತ ಲೈಂಗಿಕ ಸಂದರ್ಭದಲ್ಲಿ ಆಕೆಯ ದೇಹದ ಭಾಗಗಳನ್ನೆಲ್ಲ ಕಚ್ಚಿದ್ದಾನೆ. ಇದರಿಂದ ಭಯಗೊಂಡ ಹೆಂಡತಿ ತನ್ನ ಗಂಡನೊಂದಿಗೆ ಸಂಭೋಗ ನಡೆಸಲು ನಿರಾಕರಿಸಿದ್ದಾನೆ. ಈ ರೀತಿ ಮಾಡಿದರೆ ಕೊಲೆ ಮಾಡುವುದಾಗಿ ಗಂಡ ಬೆದರಿಕೆ ಹಾಕಿದ್ದಾನೆ.
ಈತನ ಈ ಚಿತ್ರಹಿಂಸೆ ದಿನವೂ ಸಹಿಸಲು ಸಾಧ್ಯವಾಗದೇ ಕೊನೆಗೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ತನ್ನ ತವರು ಮನೆಗೆ ವಾಪಾಸ್ಸಾದ ಹೆಂಡತಿ ಅಲ್ಲಿಯೇ
ದೂರನ್ನು ನೀಡಿದ್ದಾಳೆ.
ಈ ವಿಷಯ ನ್ಯಾಯಾಲಯಕ್ಕೆ ಹೋಗುತ್ತಲೇ ಪತಿರಾಯ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ತನ್ನನ್ನು ಬಂಧಿಸುವ ಸಾಧ್ಯತೆ ಇದ್ದು, ಪೊಲೀಸರು ಬಂಧಿಸದಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದ.
ಆದರೆ ಕೋರ್ಟ್ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಕೋರ್ಟ್ ಆತನ ಅರ್ಜಿಯನ್ನು ವಜಾ ಮಾಡಿತ್ತು.
ವಿಚಾರಣೆ ಮುಂದುವರಿಸಿದ ಕೋರ್ಟ್, ಈತನ ಹಲ್ಲು ಹೀಗೆ ಇದ್ದರೆ ಅಪಾಯ ಎಂದು ಹೇಳಿ ಆತನ ಕೃತಕ ಹಲ್ಲುಗಳನ್ನು ತೆಗೆದು ಹಾಕುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ಸದ್ಯಕ್ಕೆ ಪತಿಮಹಾಶಯ ತನ್ನ ಕೃತಕ ಹಲ್ಲನ್ನು ಕಳೆದುಕೊಂಡಿದ್ದಾನೆ.