ರಾಜ್ಯ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯ ಮೂರನೇ ದಿನವಾದ ನಿನ್ನೆ ನಾಯಕರಿಬ್ಬರು ಹೊಯ್ ಕೈ ಮಾಡಿಕೊಂಡ ಘಟನೆ ನಡೆದಿದೆ.
ಹಿರಿಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ನಡೆಯುವ ವೇಳೆ ಇತರರನ್ನು ಪಕ್ಕಕ್ಕೆ ಸರಿಸುವ ಸಂದರ್ಭ ಈ ಘಟನೆ ನಡೆದಿದ್ದು,ಅಡ್ಡ ಬಂದ ಯುವ ನಾಯಕ ಮಹಮ್ಮದ್ ಹ್ಯಾರಿಸ್ ನಳಪಾಡ್ ರನ್ನು ಸಂಸದ ಡಿಕೆ ಸುರೇಶ್ ಕಾಲರ್ ಪಟ್ಟಿ ಹಿಡಿದು ಪಕ್ಕಕ್ಕೆ ತಳ್ಳಿದಲ್ಲದೇ, ಅಡ್ಡ ಬರಬೇಡ ಎಂದು ಎಚ್ಚರಿಕೆ ನೀಡಿದರು.
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಎಡವಟ್ಟುಗಳು ಟ್ರೋಲಿಗರ ಕೈಯಲ್ಲಿ ಇಡೀ ರಾಜ್ಯದ ಜನತೆಗೆ ತಮಾಷೆಗೂ ಕಾರಣವಾಗುತ್ತಿದೆ. ಇತ್ತ ನಡುವೆ ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣ ಕೆಲ ನಾಯಕರ ಮೇಲೆ ಎಫ್.ಐ.ಆರ್ ದಾಖಲಾಗಿದೆ.
You must log in to post a comment.