ಹೀಗೂ ಒಂದು ಸಂಘವಿದೆ, ಅದು ಕೊರೋನಾ ವ್ಯಾಕ್ಸಿನ್ ವಿರೋಧಿಗಳ ಸಂಘ, ಈತನೇ ಅದರ ಹೆಡ್ ಮಾಸ್ಟ್ರು !

ಕೊರೊನಾ ಸಾಂಕ್ರಾಮಿಕ ರೋಗ ಜಗತ್ತನ್ನು ಆವರಿಸಿ ಎರಡು ವರ್ಷಗಳೇ ಕಳೆದು ಹೋಗಿದೆ. ಇಡೀ ವಿಶ್ವವೇ ಇದರ ವಿರುದ್ಧ ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ಅಸಂಖ್ಯಾತ ಮಂದಿ ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳಲು ಇನ್ನೂ ಹಿಂದೇಟು ಹಾಕುತ್ತಿದ್ದಾರೆ. ಈ ಲಸಿಕಾ ವಿರೋಧಿಗಳು ವ್ಯಾಕ್ಸಿನ್ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಯಾವ ಹಂತಕ್ಕೂ ತಲುಪುತ್ತಾರೆ ಎಂದು ಎಲ್ಲರಿಗೂ ತಿಳಿದ ವಿಷಯ‌.

ಇದೀಗ ಈ ವ್ಯಕ್ತಿಯೊಬ್ಬ ನೀಡಿದ ಹೇಳಿಕೆಗೆ ನೆಟ್ಟಿಗರು ಥೂ…ವ್ಯಾಕ್ ಎಂದಿದ್ದಾರೆ. ಆತನೇ ಈ ಕೊರೋನಾ  ಲಸಿಕೆ ವಿರೋಧಿ ಸಂಘದ ಮುಖ್ಯೋಪಾಧ್ಯಾಯ!

ಲಸಿಕೆ ವಿರೋಧಿ ಸಮುದಾಯದ ಪ್ರಮುಖ ವ್ಯಕ್ತಿಯೊಬ್ಬರು ತಮ್ಮ ಅನುಯಾಯಿಗಳಿಗೆ ಕೋವಿಡ್ 19 ನಿಂದ ತಮ್ಮನ್ನು ರಕ್ಷಣೆ ಪಡೆದುಕೊಳ್ಳಲು, ಲಸಿಕೆ ಹಾಕಿಸಿಕೊಳ್ಳುವ ಬದಲು ತಮ್ಮದೇ ಮೂತ್ರವನ್ನು ಕುಡಿಯಲು ಸಲಹೆ ನೀಡಿದ್ದಾರೆ.  ಈ ಮಾತನ್ನು ಹೇಳಿರೋದು ಲಸಿಕಾ ವಿರೋಧಿ ಗುಂಪಿನ ಮುಖ್ಯಸ್ಥರಾಗಿರುವ ಕ್ರಿಸ್ಟೋಫರ್. ಈ ಹೇಳಿಕೆ ನಿಜವಾಗಲೂ ಎಲ್ಲರಿಗೂ ವಿಚಿತ್ರ ಎನಿಸಿದ್ದು ಸುಳ್ಳಲ್ಲ.

ಕೊರೊನಾ ವೈರಸ್ ಗೆ ಮೂತ್ರ ವಿಷವಾಗಿ ಪರಿಣಮಿಸುತ್ತದೆ. ಕೊರೊನಾ ವಿರುದ್ಧ ಮೂತ್ರವೇ ಚಿಕಿತ್ಸೆ ಎಂದು ಕ್ರಿಸ್ಟೋಫರ್ ಹೇಳಿದಾಗ ಅಲ್ಲಿದ್ದ ಜನರೆಲ್ಲಾ ಮೌನವಾಗಿದ್ದಾರೆ. ಕಳೆದ 23  ವರ್ಷಗಳಿಂದ ನಾನು ಮೂತ್ರ ಕುಡಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಅನೇಕರು ವಿವಿಧ ಕಾರಣಗಳಿಗಾಗಿ ತಮ್ಮದೇ ಆದ ಮೂತ್ರವನ್ನು ಕುಡಿಯುತ್ತಾರೆ. ಆದರೆ ಮೂತ್ರವು ಯಾವುದೇ ರೀತಿಯಲ್ಲಿ ಕೊರೊನಾ ರೋಗವನ್ನು ಗುಣಪಡಿಸುತ್ತದೆ ಎಂದು ಸಾಬೀತು ಪಡಿಸಲು ಯಾವುದೇ ವೈದ್ಯಕೀಯ ಪುರಾವೆಗಳಾಗಲಿ ಅಥವಾ ಅಧ್ಯಯನಗಳಾಗಲಿ ಇಲ್ಲ.

Leave A Reply