ಅಣ್ಣನ ಮೃತದೇಹ ಕಂಡು ಹಾರಿಹೋಯಿತು ತಂಗಿಯ ಪ್ರಾಣಪಕ್ಷಿ : ಮೈಸೂರಲ್ಲೊಂದು ಮನಕಲಕುವ ಘಟನೆ

ಮೈಸೂರು : ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಅಣ್ಣನ ಮೃತದೇಹ ನೋಡಿ ತಂಗಿ ಆಘಾತಗೊಂಡು ಮೃತಪಟ್ಟಿದ್ದಾಳೆ. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಈ ಮನಕಲಕುವ ಘಟನೆ ನಡೆದಿದೆ.

 

ಅಂತ್ಯಸಂಸ್ಕಾರಕ್ಕೆ ಬಂದಿದ್ದ ದೊಡ್ಡಪ್ಪನ ಮಗಳು ರಶ್ಮಿ( 21), ಅಣ್ಣ ಕೀರ್ತಿ ( 28) ಮೃತದೇಹ ನೋಡಿ ಸಾವನ್ನಪ್ಪಿದ್ದಾಳೆ.

ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕೀರ್ತಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ. ಈ ದುರ್ಘಟನೆ ಹುಣಸೂರು ತಾಲೂಕಿನ ಸೋಮನಹಳ್ಳಿ ಗೇಟ್ ಬಳಿ ನಡೆದಿತ್ತು. ಹಾಗೂ ಈ ಘಟನೆ ಮೂವರಿಗೆ ಗಂಭೀರ ಗಾಯಗಳಾಗಿದ್ದವು.

ಇಂದು ಅಣ್ಣನ ಅಂತ್ಯಸಂಸ್ಕಾರಕ್ಕೆ ಬಂದ ತಂಗಿ ಅಣ್ಣನ ಮೃತದೇಹ ನೋಡಿ ಕುಸಿದು ಬಿದ್ದಿದ್ದಾಳೆ, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಶ್ಮಿ ಪ್ರಾಣಬಿಟ್ಟಿದ್ದಾಳೆ.

ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.