ವಿಶ್ವದ ಕಾಂಡೊಮ್ ಖರೀದಿಯಲ್ಲಿ 40 % ಕುಸಿತ | ಅದರ ಬದಲು ಕೈಕವಚ ತಯಾರಿಕೆಗೆ ತೊಡಗಿದ ಲ್ಯಾಟೆಕ್ಸ್ ಕಂಪನಿಗಳು !
ವಿಶ್ವದಾದ್ಯಂತ ಕೊರೊನಾ ಆರ್ಭಟ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಅನೇಕ ಉದ್ಯಮಗಳ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.
ಜನ ಮಾಸ್ಕ್ ಹಾಗೂ ಗ್ಲೌಸ್ ಬಳಕೆ ಹೆಚ್ಚಾಗಿ ಮಾಡುತ್ತಿದ್ದಾರೆ. ಇದರಿಂದಾಗಿ ಜನರಿಗೆ ಆರೋಗ್ಯದ ಮೇಲೆ ಹೆಚ್ಚು ಮುತುವರ್ಜಿ ವಹಿಸುತ್ತಿದ್ದಾರೆ. ಈಗ ಲಭ್ಯ ಮಾಹಿತಿಗಳ ಪ್ರಕಾರ ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಕಳೆದ ಎರಡು ವರ್ಷಗಳಿಂದ ಕಾಂಡೋಮ್ ಮಾರಾಟದಲ್ಲಿ ಶೇ.40 ರಷ್ಟು ಕುಸಿತ ಕಂಡಿದೆ. ಕೋರೋನಾ ಅನ್ನುವ ರೋಗವು ವಿಶ್ವದ ಫೇವರಿಟ್ ಆಟ ಆಡಲು ಕೂಡಾ ಜನರನ್ನು ಬಿಡುತ್ತಿಲ್ಲ. ಜನರು ರೋಗ ಭಯದಿಂದ ದೂರ ನಿಲ್ಲುತ್ತಿದ್ದಾರೆ. ಸಂಪರ್ಕ ಮಾಡಿದರೆ ಅಮರಿಕೊಳ್ಳಬಹುದಾದ ಅಂಟು ಜಾಡ್ಯದ ಭಯ ಸೆಕ್ಸ್ ನಲ್ಲಿ ಪೂರ್ತಿ ತೊಡಗಿಕೊಳ್ಳದಂತೆ ಜನರನ್ನು ತಡೆದಿದೆ. ಹಾಗೆ ಮಾರಾಟ ಕುಸಿದ ಪರಿಣಾಮ ಕಾಂಡೋಮ್ ತಯಾರಿಕಾ ಕಂಪನಿಗಳು ‘ ಅದರ “ಬದಲಾಗಿ ಕೈಗೆ ಕವಚ ಹೊಲಿಯಲು ಶುರು ಮಾಡಿವೆ.
ಈ ಕೊರೊನಾ ಕಾಲದಲ್ಲಿ ಲಾಕ್ ಡೌನ್ ಮಾಡಿದ್ದ ಸಮಯದಲ್ಲಿ ಜನರು ಮನೆಯಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಲೈಂಗಿಕ ಚಟುವಟಿಕೆ ಒಮ್ಮೆ ಹೆಚ್ಚಾದ ಹಾಗೆ ಕಂಡಿತ್ತು. ಆದ್ರೆ ಹೆಚ್ಚಾಗಲಿಲ್ಲ ಎಂಬುದನ್ನು ಕಾಂಡೋಮ್ ಮಾರಾಟಗಳ ಕುಸಿತ ಹೇಳುತ್ತದೆ ಎಂದು ಕಾಂಡೋಮ್ ಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ಮಲೇಷಿಯಾ ಮೂಲದ ‘ ಕರೆಕ್ಸ್ ‘ ಕಂಪನಿಯ ಸಿಇಒ ಗೊ ಮಿಯಾ ಕಿಯಾತ್.
ಇದಕ್ಕೆ ಒಂದು ಮುಖ್ಯ ಕಾರಣ ಹೋಟೆಲ್, ಲಾಡ್ಜ್, ರೆಸಾರ್ಟ್, ಮನರಂಜನಾ ತಾಣಗಳು ಸಾಂಕ್ರಾಮಿಕದ ಅವಧಿಯಲ್ಲಿ ಬಹುತೇಕ ಮುಚ್ಚಲ್ಪಟ್ಟಿದ್ದವು.
ಇದರಿಂದಾಗಿ ಕಾಂಡೋಮ್ ಗಳ ಮಾರಾಟ ಗಣನೀಯವಾಗಿ ಕುಸಿತ ಕಂಡಿದೆ. ಹೀಗಾಗಿ ಈ ಕಂಪನಿ ಕಾಂಡೋಮ್ ಗಳ ಕಡೆಗೆ ಗಮನ ಕಡಿಮೆ ಮಾಡಿ ಕೈಗವಸ್ತುಗಳ ತಯಾರಿಕೆಯಲ್ಲಿ ತೊಡಗಿಕೊಳ್ಳೋದಾಗಿ ಹೇಳಿದೆ.
ವಿಶ್ವದಾದ್ಯಂತ ಪ್ರತಿ ಐದು ಕಾಂಡೋಮ್ ಗಳಲ್ಲಿ ಒಂದನ್ನು ತಯಾರಿಸುವ ಮಲೇಷ್ಯಾ ಮೂಲದ ಕಂಪನಿಯು ಈಗ ಕಾಂಡೋಮ್ ಮಾರಾಟದಲ್ಲಿ ನಷ್ಟ ಉಂಟಾಗಿರುವುದರಿಂದ ವೈದ್ಯಕೀಯ ಹ್ಯಾಂಡ್ ಗ್ಲೌಸ್ ತಯಾರಿಕೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ ಎಂದಿದೆ. ಲಾಕ್ ಡೌನ್ ಸಮಯದಲ್ಲಿ ಕಾಂಡೋಮ್ ಗಳ ಮಾರಾಟ ಗಣನೀಯ ಹೆಚ್ಚಾಗಬಹುದು ಎಂದು ಕಂಪನಿ ಲೆಕ್ಕಾಚಾರ ಮಾಡಿತ್ತು. ಆದ್ರೆ ಅದು ಹುಸಿ ಆಗಿತ್ತು. ಅದಕ್ಕಾಗೇ ಗ್ಲೌಸ್ ತಯಾರಿಕೆಗೆ ತೊಡಗಿವೆ ಕಂಪನಿಗಳು.
ಕರೆಕ್ಸ್ ಕಂಪನಿ ವರ್ಷಕ್ಕೆ 500 ಕೋಟಿ ಕಾಂಡೋಮ್ ಗಳನ್ನು ಉತ್ಪಾದಿಸಿ 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ.
ಕರೆಕ್ಸ್ ಡ್ಯುರೆಕ್ಸ್ ನಂತಹ ಬ್ರ್ಯಾಂಡ್ ಗಳು ತನ್ನದೇ ಆದ ವಿಶೇಷ ಕಾಂಡೋಮ್ ಗಳಾದ ಡ್ಯೂರಿಯನ್ ಫ್ಲೇವರ್ ಗಳನ್ನು ಉತ್ಪಾದಿಸುತ್ತದೆ.