ಮದುವೆ ಮಂಟಪದಲ್ಲೇ ವಿಚ್ಛೇದನ ನೀಡಿದ ವರ! | ಇದೇ ನೋಡಿ ವಿಶ್ವದ ಅತ್ಯಂತ ಫಾಸ್ಟೆಸ್ಟ್ ವಿಚ್ಛೇದನ|ಅದಕ್ಕೆ ಕಾರಣ ಒಂದು ಹಾಡು ಅಂದ್ರೆ ನೀವ್ ನಂಬ್ತೀರಾ ?!

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಈಗಿನ ಕಾಲದಲ್ಲಿ ವಿಚ್ಛೇದನ ಪ್ರಕರಣಗಳು ಸರ್ವೇ ಸಾಮಾನ್ಯ ಆಗಿದೆ. ಕೆಲವೊಂದು ದೇಶಗಳಲ್ಲಿ ವಿಚ್ಛೇದನ ತರಕಾರಿ ಸಿಪ್ಪೆ ಸುಲಿದಂತೆ ಸಲೀಸು. ಕೆಲವರು ಮದುಮಗಳ ಮೆಹಂದಿ ಮಾಸುವ ಮುನ್ನವೇ ವಿಚ್ಛೇದನ ಪಡೆದರೆ, ಇನ್ನೂ ಕೆಲವೆಡೆ ಮದುವೆಯಾಗಿ ಮಕ್ಕಳಾದ ಮೇಲೆ ವಿಚ್ಛೇದನ ಪಡೆಯುವವರಿದ್ದಾರೆ. ಮುದುಕರಾದ ಮೇಲೆ ಕೂಡಾ ವಿಚ್ಛೇದನ ಪಡೆಯುವವರೂ ಕೂಡಾ ಕೆಲವೊಂದು ದೇಶದಲ್ಲಿ ನಾವು ಕಾಣಬಹುದು. ಆದರೆ ಇವೆಲ್ಲದಕ್ಕೂ ಒಂದು ಕಾರಣಗಳು ಇರುತ್ತವೆ. ಅಥವಾ ಇಲ್ಲದೆಯೇ ಇರಬಹುದು. ಆದರೆ ಮದುವೆ ದಿನ ಮಂಟಪದಲ್ಲೇ ವರ ವಿಚ್ಛೇದನ ನೀಡಿದ್ದನ್ನು ನೀವು ಎಲ್ಲಿಯಾದರೂ ಕೇಳಿದ್ದೀರಾ ? ಹೌದು ಈ ಮಾತು ಕೇಳಿ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ನಿಜ. ಹಾಗಾದರೆ ದೊಡ್ಡ ಕಾರಣನೇ ಇರಬಹುದೇ ಅಂತ ನೀವು ಊಹಿಸಬಹುದು. ಆದರೆ ಇಲ್ಲಿ ಇರುವುದು ಮಾತ್ರ ದಡ್ಡ ಕಾರಣ ಮಾತ್ರ…! ಅದೇನು ಅಂತೀರಾ ?

Ad Widget

ಇರಾಕ್ ವರನೊಬ್ಬ ಮದುವೆ ಸಮಯದಲ್ಲಿ ಪ್ರಚೋದನಕಾರಿ ಸಿರಿಯನ್ ಹಾಡಿಗೆ ವಧು ನೃತ್ಯ ಮಾಡಿದ್ದಕ್ಕೆ ನಿಂತ ಜಾಗದಲ್ಲೇ ವಿಚ್ಛೇದನ ನೀಡಿದ್ದಾನೆ. ಇದು ಇರಾಕ್ ನಲ್ಲಿ ನಡೆದ ಅತ್ಯಂತ ವೇಗದ ವಿಚ್ಛೇದನ ಎಂದು ಪರಿಗಣಿಸಲಾಗಿದೆ.

Ad Widget . . Ad Widget . Ad Widget . Ad Widget

Ad Widget

ಹುಡುಗ ಬಾಗ್ದಾದ್ ನಿವಾಸಿ. ಈ ಹಾಡನ್ನು ಕೇಳಿ ವರನಿಗೆ ಸಿಕ್ಕಾಪಟ್ಟೆ ಬೇಜಾರಾಗಿ, ಕೆಲ ಸಮಯದ ಹಿಂದೆ ನೀ ನನ್ನ ನಲ್ಲೆ ಅಂತಾ ಹೇಳುತ್ತಿದ್ದವನು ಮದುವೆ ಮಂಟಪದಲ್ಲಿ ನಾ ನಿನ್ನ ಒಲ್ಲೆ ಎಂದು ವಿಚ್ಛೇದನ ನೀಡಲು ನಿರ್ಧರಿಸಿದ್ದಾನೆ‌.

Ad Widget
Ad Widget Ad Widget

ಅಷ್ಟಕ್ಕೂ ವರನ ಮನಸ್ಸನ್ನು ವಿಚ್ಛೇದನ ನೀಡುವಷ್ಟರ ಮಟ್ಟಿಗೆ ಪ್ರಚೋದಿಸುವಂತದ್ದು ಏನಿತ್ತು ಆ ಹಾಡಿನಲ್ಲಿ ? ಮದುವೆ ಕಾರ್ಯಕ್ರಮದಲ್ಲಿ ನಾನು ಪ್ರಬಲ ಅಥವಾ ನಾನು ನಿನ್ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತೇನೆ ಎಂಬ ಅರ್ಥ ಬರುವಂತ ಒಂದು ಹಾಡಿಗೆ ವಧು ನೃತ್ಯ ಮಾಡಿದ್ದಕ್ಕೆ ಹಾಗೂ ಇದು ವರ ಹಾಗೂ ಆತನ ಕುಟುಂಬದ ಭಾವನೆಗೆ ಧಕ್ಕೆಯಾಗಿದೆ ಎಂದು ಹೇಳಿಕೊಂಡು, ಈ ಹಾಡಿನ ವಿಚಾರವಾಗಿ ವಧು- ವರರ ಕುಟುಂಬದ ನಡುವೆ ವಾಗ್ವಾದ ತಾರಕಕ್ಕೇರುತ್ತಿದ್ದಂತೆಯೇ ವರ ತನ್ನ ವಿಚ್ಛೇದನ ನೀಡಿದ ಎನ್ನಲಾಗಿದೆ‌.

Leave a Reply

error: Content is protected !!
Scroll to Top
%d bloggers like this: