ಮಂಗಳೂರು: ಎಲ್. ಜಿ ಶೋರೂಂನಲ್ಲಿ ಅಗ್ನಿ ಅವಘಡ, ಎಲೆಕ್ಟ್ರಾನಿಕ್ಸ್ ಸೊತ್ತುಗಳು ಬೆಂಕಿಗಾಹುತಿ

Share the Article

ಮಂಗಳೂರು ನಗರದ ಬೆಂದೂರ್ ವೆಲ್ ನಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಎಲೆಕ್ಟ್ರಾನಿಕ್ಸ್ ಸೊತ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಬೆಂದೂರ್ ವೆಲ್ ನಲ್ಲಿರುವ ಮಾಯಾ ಇಂಟರ್ ನ್ಯಾಷನಲ್ ಬಿಲ್ಡಿಂಗ್ ನಲಿರುವ ಪಾರಾಮೌಂಟ್ ವೆಸ್ಟ್ ಗೇಟ್ ಸನಿಹವಿರುವ ಎಲ್. ಜಿ ಶೋರೂಂ ನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಅವಘಡದ ಪರಿಣಾಮ ದುಬಾರಿ ಎಲೆಕ್ಟ್ರಾನಿಕ್ಸ್ ಸಾಧನ ಸಹಿತ ಸಂಪೂರ್ಣ ಮಳಿಗೆ ಭಸ್ಮವಾಗಿದೆ.

ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಪಾಂಡೇಶ್ವರ ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿ ಅಕ್ಕ ಪಕ್ಕದ ಅಂಗಡಿಗೂ ಬೆಂಕಿ ಹರಡಿ ಅನಾಹುತ ಸಂಭವಿಸಿದಂತೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ.

Leave A Reply