ಪಕ್ಷಿಗಳಿಗಾಗಿ 20 ಲಕ್ಷ ವೆಚ್ಚದ ಬಂಗ್ಲೆಯನ್ನೇ ನಿರ್ಮಿಸಿದ ಆಧುನಿಕ ಪಕ್ಷಿ ಪ್ರೇಮಿ !
ಈಗಂತೂ ಬಹುತೇಕರಿಗೆ ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು ಕಂಡರೆ ವಿಪರೀತ ಕಿರಿಕಿರಿ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವರು ಮಾತ್ರ ಈ ಸಾಕುಪ್ರಾಣಿ ಮತ್ತು ಪಕ್ಷಿಗಳನ್ನು ತಮ್ಮ ಮನೆಯಲ್ಲಿಯೇ ತಮ್ಮ ಜೊತೆಗೆ ಇರಿಸಿಕೊಂಡು ಮಕ್ಕಳಂತೆ ಸಾಕುತ್ತಿರುತ್ತಾರೆ.
ಕೆಲವರು ಮಾತ್ರ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುತ್ತಾರೆ ಮತ್ತು ಅವುಗಳನ್ನು ತಮ್ಮ ಸ್ವಂತ ಮಕ್ಕಳಿಗಿಂತಲೂ ಜೋಪಾನವಾಗಿ ಸುರಕ್ಷಿತವಾಗಿ ಕಾಪಾಡುತ್ತಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಇನ್ನೊಬ್ಬರು 75 ವರ್ಷದ ವ್ಯಕ್ತಿಯು ಪಕ್ಷಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಅವುಗಳಿಗಾಗಿ ಭವ್ಯವಾದ ಪಕ್ಷಿ ಮನೆಯನ್ನೇ ಕಟ್ಟಿಸಿದ್ದಾರೆ ನೋಡಿ. ಇವರ ಹೆಸರು ಭಗವಾನ್ ಜೀ ರೂಪಪಾರಾ, ಇವರು ಸಣ್ಣ ಪಕ್ಷಿ ಮನೆಗಳಿಂದ ಸ್ಫೂರ್ತಿ ಪಡೆದು ಭವ್ಯವಾದ ಪಕ್ಷಿ ಮನೆಯೊಂದನ್ನು ಕಟ್ಟಿಸಿದ್ದಾರೆ.
ಗುಜರಾತ್ ಮೂಲದ ಭಗವಾನ್ಜೀ 140 ಅಡಿ ಉದ್ದ, 10 ಅಡಿ ಅಗಲ ಮತ್ತು 40 ಅಡಿ ಎತ್ತರ ಇರುವ ಪಕ್ಷಿ ಮನೆಯನ್ನು ತಯಾರಿಸಲು ಒಂದಲ್ಲ, ಎರಡಲ್ಲ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಇವರಿಗಿದ್ದಂತಹ ಪಕ್ಷಿ ಪ್ರೀತಿಯಿಂದ ಇವರು ಈ ದೈತ್ಯಾಕಾರದ ಪಕ್ಷಿ ಮನೆಯನ್ನು ಕಟ್ಟಿಸಲು ತನ್ನ ಭೂಮಿ ಮತ್ತು ಸ್ವಂತ ಉಳಿತಾಯದ ಹಣವನ್ನು ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷಿಗಳಿಗೆ ಸುರಕ್ಷಿತ ಆಶ್ರಯ ಒದಗಿಸಲು ಮತ್ತು ಹಾನಿಕಾರಕ ಹವಾಮಾನ ಪರಿಸ್ಥಿತಿಗಳಿಂದ ಅವುಗಳನ್ನು ರಕ್ಷಿಸಲು ಈ ಪಕ್ಷಿ ಮನೆಯನ್ನು ಕಟ್ಟಿಸಲಾಯಿತು ಎಂದು ಇವರು ಹೇಳುತ್ತಾರೆ.
ಈ ಪಕ್ಷಿ ಮನೆಯನ್ನು ನದಿ ತೀರದಲ್ಲಿ ನಿರ್ಮಿಸಲಾಯಿತು. ಇದಕ್ಕಾಗಿ 2,500ಕ್ಕೂ ಹೆಚ್ಚು ಮಣ್ಣಿನ ಮಡಕೆಗಳನ್ನು ಕಸ್ಟಮೈಸ್ ಮಾಡಲಾಗಿದೆ.