ಮೊಣಕಾಲು ಆಳವಾದ ಹಿಮದಲ್ಲಿ ಗನ್ ಹಿಡಿದು ನಿಂತ ಕೆಚ್ಚೆದೆಯ ವೀರ|ದೇಶಕ್ಕಾಗಿ ಹೊರಡೋ ಯೋಧನ ಈ ವೀಡಿಯೋಗೆ ನಮ್ಮದೊಂದು ಸೆಲ್ಯೂಟ್

Share the Article

ದೇಶದ ಗಡಿಕಾಯುವ, ದೇಶದ ರಕ್ಷಣೆಗೆ ಪ್ರಾಣವನ್ನೇ ತ್ಯಾಗ ಮಾಡುವ ವೀರ ಯೋಧನಿಗೆ ಯಾರೂ ಸರಿಸಾಟಿ ಇಲ್ಲ. ಅಂತೆಯೇ ಇದೀಗ ಕಾಶ್ಮೀರದ ಹಿಮದಲ್ಲಿ ದೃಢವಾಗಿ ನಿಂತಿರುವ ಸೇನಾ ಯೋಧರೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕಾಶ್ಮೀರದಲ್ಲೀಗ ಭೀಕರ ಹಿಮ ಬಿರುಗಾಳಿ ಬೀಸುತ್ತಿದ್ದು, ಇದೀಗ ಮೊಣಕಾಲು ಆಳವಾದ ಹಿಮದಲ್ಲಿ ಸೇನಾ ಯೋಧರೊಬ್ಬರು ಗನ್ ಹಿಡಿದುಕೊಂಡು ದೃಢವಾಗಿ ನಿಂತಿರುವ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಸಚಿವಾಲಯದ ಉದಂಪುರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಟ್ವಿಟ್ಟರ್ ನಲ್ಲಿ”ಯಾವ ಸುಲಭದ ಭರವಸೆ ಅಥವಾ ಸುಳ್ಳುಗಳು ನಮ್ಮನ್ನು ಗುರಿಯೆಡೆಗೆ ಕರೆದೊಯ್ಯುವದಿಲ್ಲ. ಆದರೆ ತನು ಮನ ಹಾಗೂ ಆತ್ಮ ತ್ಯಾಗವೂ ನಿಮ್ಮನ್ನು ಗುರಿಯೆಡೆಗೆ ಕರೆದೊಯ್ಯುತ್ತದೆ. ಅಲ್ಲಿರುವುದು ಒಂದೇ ಒಂದು ಎಲ್ಲರೂ ಸಾಧಿಸಬೇಕಾದ ಕಾರ್ಯ, ಸ್ವಾತಂತ್ರ್ಯ ಪತನಗೊಂಡಾಗ ಎದ್ದು ನಿಲ್ಲುವರ್ಯಾರು?” ಎಂದು ಬರೆದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ವೀಡಿಯೋ 7 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ. ಜನರು ಸೈನಿಕನ ತಾಳ್ಮೆ ಮತ್ತು ಶಕ್ತಿಗೆ ಕೆಲವರು ಬೆರಗಾದರೆ, ಇತರರು ಅಂತಹ ಕಠಿಣ ಪರಿಸ್ಥಿತಿಗಳ ನಡುವೆ ದೇಶವನ್ನು ರಕ್ಷಿಸಿದ್ದಕ್ಕಾಗಿ ಅವನಿಗೆ ಸೆಲ್ಯೂಟ್ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave A Reply