ಸಾಧನೆಯ ಬೆಳ್ಳಿ ಚುಕ್ಕಿ – ಐಶ್ವರ್ಯ ಉಡುಪಿ
ಯುವಕ,ಯುವತಿಯರೆಂದರೇ ದೇಶದ ಆಸ್ತಿ. ನಮ್ಮ ದೇಶದ ಯುವಕ/ಯುವತಿಯರ ಕಾರ್ಯಸಾದನೆ,ಗುರಿ,ಕಲಿಕಾಮಟ್ಟ, ಶ್ರದ್ಧೆ ನಮ್ಮ ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡ್ಯೊಯುವುದರಲ್ಲಿ ಅನುಮಾನವೇ ಇಲ್ಲ. ನಾನಿಂದು ಹೆಮ್ಮೆಯಿಂದ ಪರಿಚಯಿಸುವ ಪ್ರತಿಭೆ ಸಿಕ್ಕ ಅಲ್ಪ ಪ್ರಮಾಣದ ಅವಕಾಶವನ್ನು ಸಮಯೋಚಿತ್ತವಾಗಿ ಉಪಯೋಗಿಸುತ್ತ ಎಲ್ಲಾ ಕ್ಷೇತ್ರಗಳಲ್ಲಿನ ಸಾಧನೆಯ ಬೆಳ್ಳಿ ಚುಕ್ಕಿ ಐಶ್ವರ್ಯ ಉಡುಪಿ.
ಉಡುಪಿಯ ಮೂಡುಬೆಳ್ಳೆ ನಿವಾಸಿ ಎಂ ಕುಮಾರ್ ಹಾಗೂ ವನಿತರವರ ಮಗಳು. ಇವರು ಎಲ್ ಕೆ ಜಿ ಯಿಂದ ಹತ್ತನೇ ತರಗತಿಯವರೆಗೆ ಕಿಶ್ಚಿಯನ್ ಹೈಸ್ಕೂಲ್ನಲ್ಲಿ ಪೂರೈಸಿ ಹತ್ತನೇ ತರಗತಿಯಲ್ಲಿ 84.48% ಅಂಕ ಪಡೆದವರು. ಪಿಯುಸಿ ಹಾಗೂ ಬಿ ಸಿ ಎ ಪದವಿಯನ್ನು ಎಂ ಜಿ ಎಂ ಕಾಲೇಜ್ ಉಡುಪಿಯಲ್ಲಿ ಪೂರೈಸಿ, ಪಿಯುಸಿಯಲ್ಲಿ 89.16% ಹಾಗೂ ಪದವಿಯಲ್ಲಿ 86% ಅಂಕವನ್ನು ಗಳಿಸಿದ ಪ್ರತಿಬಾನ್ವಿತ ವಿದ್ಯಾರ್ಥಿನಿ.
ಶಾಲಾ ದಿನಗಳಿಂದಲೇ ಅಂದವಾದ ಬರವಣಿಗೆ ,ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕು,ಜಿಲ್ಲಾ ಮಟ್ಟದಲ್ಲಿ ಹಲವಾರು ಬಹುಮಾನವನ್ನು ಪಡೆದವರು.ನಾಟಕದಲ್ಲಿಯು ಭಾಗವಹಿಸಿದ್ದಾರೆ ಕೂಡ..
ಇವರಿಗೆ ಹೆಸರು ಮಾಡಿಕೊಟ್ಟದ್ದು ಬೆಲ್ಲಿ ಡಾನ್ಸ್ , ಹಾಗೂ ನಿರೂಪಣೆ. ಎಲ್ಲಾ ವಿದದ ನೃತ್ಯ ಕಾರ್ಯಕ್ರಮವನ್ನು ಹಲವಾರು ಕಡೆ ನೀಡಿರುತ್ತಾರೆ.ಅಲ್ಲದೇ ಹಲವಾರು ಕಾರ್ಯಕ್ರಮದಲ್ಲಿ,ಟ ವಿ ಯಲ್ಲಿ ನಿರೂಪಕಿಯಾಗಿಯು ಜನರ ಪ್ರೀತಿ ಹಾಗೂ ಅಭಿಮಾನವನ್ನು ಗಳಿಸಿರುತ್ತಾರೆ. ಹುಲಿಕುಣಿತವೆಂದರೆ ಇವರಿಗೆ ಅಪಾರ ಅಭಿಮಾನ ಹಾಗೂ ಆಸಕ್ತಿ. ತನ್ನ ಕುಟುಂಬ ವರ್ಗದಲ್ಲಿ ಹಾಗೂ ಸ್ನೇಹಿತರ ಬಳಗದಲ್ಲಿ ಹೆಣ್ಣು ಹುಲಿ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಅದಲ್ಲದೇ ಬರವಣಿಗೆ ಬರೆಯುವುದು ,ಛಾಯಾಗ್ರಹಣ ,ಡಿ ಜೆ , ,ಡ್ರಾಯಿಂಗ್ ,ಕುಕ್ಕಿಂಗ್, ಎಲ್ಲದರಲ್ಲೂ ಅಭಿರುಚಿಯನ್ನು ಹೊಂದಿದ ಇವರು ಕ್ರೀಡೆಯಲ್ಲಿಯೂ ಭಾಗವಹಿಸಿರುತ್ತಾರೆ. ಹಲವಾರು ಕಡೆ ಕಾರ್ಯಕ್ರಮದಲ್ಲಿ ಹಾಡುಗಳನ್ನು ಹಾಡುವ ಅಭಿರುಚಿಯನ್ನು ಹೊಂದಿದ್ದಾರೆ .
ತನ್ನ ಮನೆ ಸುತ್ತಮುತ್ತಲಿನ ಮಕ್ಕಳಿಗೆ ಯುಂಭ ನೃತ್ಯವನ್ನು ಉಚಿತವಾಗಿ ಕಲಿಸುತ್ತಾ, ತನ್ನಿದಾದಷ್ಟು ಸಹಾಯವನ್ನು ಬಡಜನರಿಗೂ ನೀಡುತ್ತಾ ಬರುತ್ತಿರುವ ಸಮಾಜ ಸೇವಕಿಯು ಕೂಡ ಇವರು. ಪ್ರಸ್ತುತ ಅಮೇರಿಕಾ ಮೂಲದ ಸಾಪ್ಟ್ವೇರ್ ಕಂಪನಿಯೊಂದರ ಮಂಗಳೂರಿನ ಕಛೇರಿಯಲ್ಲಿ ಅನಾಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತನ್ನ ಉದ್ಯೋಗದ ಸ್ಥಳದಲ್ಲಿಯೂ ಉತ್ತಮ ಕೆಲಸ ನಿರ್ವಹಿಸಿದ ಪ್ರಯುಕ್ತ ಎರಡು ಬಾರಿ extra ಮಿಲ್ಲರ್ ಅವಾರ್ಡ್ ಹಾಗೂ ಐ ಸ್ಟಾರ್ ಅವಾರ್ಡ್ ಅನ್ನು ಪಡೆದವರು.
ನನಗೆ ನಾನೇ ಸ್ಪೂರ್ತಿ, ನನ್ನ ತಂದೆ ತಾಯಿ ಹಾಗೂ ಸಹೋದರನ ಸಹಕಾರದಿಂದ ನಾನು ಇಂದು ಈ ಮಟ್ಟದಲ್ಲಿ ಇದ್ದೇನೆ. ತಾನು ಗೆದ್ದಾಗ ಸಂತೋಷಪಡುತ್ತೇನೆ. ಸೋತಾಗ ಕುಗ್ಗದೇ ಗೆಲುವಿನ ಮೆಟ್ಟಿಲಲ್ಲಿ ಎಡವಿದ್ದೇನೆ ಅಂದುಕೊಳ್ಳುತ್ತೇನೆ. ನನ್ನ ನೋಡಿ ಸಾಕಷ್ಟು ಜನ ಪ್ರೇರೇಪಣೆ ಪಡೆದುಕೊಂಡಿದ್ದಾರೆ. ಶಾಲಾ ದಿನಗಳಿಂದಲೂ ಬೇರೆಯವರಿಗೆ ನನ್ನನ್ನು ಉದಾಹರಣೆಯಾಗಿ ತೆಗೆದುಕೊಳ್ಳಲು ಹೇಳುತ್ತಿದ್ದರು. ಇದು ಇನ್ನೂ ಮುಂದುವರೆಯಾಬೇಕು. ನಾನು ಯಾರನ್ನೋ ಸ್ಪೂರ್ತಿಯಾಗಿ ತೆಗೆದುಕೊಳ್ಳುವುದಕ್ಕಿಂತ ನಾನೇ ಇನ್ನೊಬ್ಬರಿಗೆ ಸ್ಫೂರ್ತಿಯಾಗಬೇಕು ಎಂದು ಹೇಳುತ್ತಾರೆ.
ಯುವಜನತೆ ಹಾಗೂ ಪ್ರತಿಭೆಗಳನ್ನು ಕುರಿತು ಇವರ ಬಗ್ಗೆ ಕೇಳಿದಾಗ, ವಿದ್ಯಾಭ್ಯಾಸದ ಜೊತೆಗೆ ಇತರೆ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಸೋತೆ ಎಂದು ನಿರಾಶರಾಗದೆ ಮುಂದೆ ಗೆಲುವಿದೆ ,ಇನ್ನೂ ಶ್ರಮ ಪಟ್ಟರೆ ಗೆಲುವು ಸಿಗಲೂ ಸಾದ್ಯ ಎಂದು ತಿಳಿದು ಮುನ್ನಡೆಯಿರಿ. ಅವಕಾಶಗಳು ಸಿಕ್ಕಾಗ ಬಳಸಿಕೊಳ್ಳಿ.ಮತ್ತೊಮ್ಮೆ ಸಿಗುತ್ತದೇ ಎಂದು ಹೇಳಲೂ ಸಾಧ್ಯವಿಲ್ಲ. ನಿಮ್ಮ ಪ್ರಯತ್ನ ಹಾಗೂ ಪ್ರಮಾಣಿಕತೆ ನಿತ್ಯ ನಿರಂತರವಾಗಲಿ ಎಂದೂ ಹೇಳುತ್ತಾರೆ ಐಶ್ವರ್ಯ.
ಉದ್ಯೋಗದ ಜೊತೆ ನಿರೂಪಣೆಯಲ್ಲಿ ಹೆಸರು ಗಳಿಸಿ ಜನರ ಮನಸ್ಸಿಗೆ ಹತ್ತಿರವಾಗಬೇಕು. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು. ಅದರಿಂದ ಒಂದಿಬ್ಬರಾದರೂ ಬದಲಾಗಬಹುದು ಅನ್ನುವಂತಹ ಆಶಯವಿದೆ.ಅನಾಥಶ್ರಮ,ವೃದ್ದಾಶ್ರಮಕ್ಕೆ ಭೇಟಿ ಕೊಟ್ಟು ನನ್ನಿಂದ ಆಗುವಷ್ಟು ಸಹಾಯ ಮಾಡಬೇಕು. ಎಂದು ಹತ್ತು ಹಲವಾರು ಕನಸನ್ನು ಇಟ್ಟಿರುವ ಇವರ ಎಲ್ಲಾ ಕನಸು ನೆರವೇರಲಿ ಹಾಗೂ ಇವರ ಎಲ್ಲಾ ಕ್ಷೇತ್ರಗಳ ಸಾಧನೆ ಸಮಾಜಕ್ಕೆ ಮಾದರಿಯಾಗಲಿ. ದೈವ ದೇವರ ಆಶೀರ್ವಾದ ಸದಾ ಇವರ ಮೇಲೆ ಇರಲಿ ಎಂಬುದೇ ನನ್ನ ಆಶಯ.
?ಬರಹ : ನೀತು ಬೆದ್ರ