ವಿಟ್ಲ: ಕೊರಗಜ್ಜನ ವೇಷತೊಟ್ಟು ಅಪಹಾಸ್ಯ ಮಾಡಿದ ಉಮರುಲ್ಲಾನ ಪುತ್ತೂರಿನ ಡ್ರೆಸ್ ಶಾಪ್ ಗೆ ತೆರಳದಂತೆ ಮುಸ್ಲಿಂ ಸಮುದಾಯದಿಂದ ಕರೆ!!!

Share the Article

ವಿಟ್ಲ: ವಿವಾಹದ ದಿನ ರಾತ್ರಿ ತುಳುನಾಡಿನ ಕಾರ್ಣಿಕದ ಆರಾಧ್ಯ ದೈವ ಕೊರಗಜ್ಜನ ವೇಷತೊಟ್ಟು ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾದ ಮದುಮಗ ಉಪ್ಪಳ ನಿವಾಸಿ ಉಮರುಲ್ ಬಾಷಿತ್ ಸದ್ಯ ತನ್ನ ಧರ್ಮದಿದವರ ಕೆಂಗಣ್ಣಿಗೂ ಗುರಿಯಾಗಿದ್ದಲ್ಲದೇ, ಆತನ ವ್ಯಾಪಾರ-ವ್ಯವಹಾರಕ್ಕೂ ಕುತ್ತು ಬಂದೊದಗಿದೆ.

ಹೌದು. ಮೊನ್ನೆಯ ದಿನ ವಿಕೃತ್ಯ ಎಸಗಿ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೂಡಲೇ ಮುಸ್ಲಿಂ ಸಮುದಾಯದವರೇ ಘಟನೆಯನ್ನು ವಿರೋಧಿಸಿದ್ದು, ಧರ್ಮಗಳ ಅವಹೇಳನಕ್ಕೆ ಯಾವ ಧರ್ಮದಲ್ಲೂ ಅವಕಾಶಗಲಿಲ್ಲ,ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಹಿಂದೂ ಬಾಂಧವರಲ್ಲಿ ಒತ್ತಾಯಿಸಿಸುವ ಆಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ನಡುವೆ ಉಮರುಲ್ಲ ಪುತ್ತೂರಿನ ಬಸ್ ನಿಲ್ದಾಣ ಸಮೀಪದಲ್ಲಿ ಡ್ರೆಸ್ ಮಳಿಗೆಯೊಂದನ್ನು ಹೊಂದಿದ್ದು, ಈತನ ವ್ಯವಹಾರಕ್ಕೆ ಸಮುದಾಯದ ಯಾರೂ ಕೂಡಾ ಸಹಕರಿಸಬಾರದು, ಆತನ ಫಾತಿಮ ಡ್ರೆಸ್ ಸೆಂಟರ್ ಗೇ ಯಾರು ಕೂಡಾ ಹೋಗಬಾರದು ಎಂಬ ಮುಸ್ಲಿಮರು ತಮ್ಮವರಿಗೆ ಕರೆಕೊಡುತ್ತಿದ್ದಾರೆ ಎಂಬ ಮಾಹಿತಿಯೊಂದು ಎಲ್ಲೆಡೆ ಹರಿದಾಡುತ್ತಿದೆ.

ಇತ್ತ ಅತ್ತಾವರದಲ್ಲಿ ನಡೆದ ಕೊರಗಜ್ಜನ ಕೋಲದಲ್ಲಿ ಅಜ್ಜನ ಅಭಯದ ನುಡಿಯ ವೀಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ, ಒಂದು ತಿಂಗಳ ಒಳಗಾಗಿ ಆತ ಹಾಗೂ ಆತನ ಕುಟುಂಬದವರು ಹುಚ್ಚು ಹಿಡಿದು ಬಿಡಿಸುತ್ತುವಂತೆ ಮಾಡುತ್ತೇನೆ ಎಂಬ ಅಜ್ಜನ ನುಡಿಗೆ ಮುಸ್ಲಿಂ ಸಮುದಾಯ ಭಯಗೊಂಡಿದೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.

Leave A Reply