ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಗೆ ಬರಸಿಡಿಲಂತೆ ಬಡಿದ ಸಾವಿನ ಸುದ್ದಿ!! ತನ್ನ ಅತೀ ಸಣ್ಣ ವಯಸ್ಸಿನಲ್ಲಿ ವಿಧಿಯ ಕ್ರೂರ ಆಟಕ್ಕೆ ಬಲಿಯಾದ ‘ಕಂದ’ನ ಸಾವಿಗೆ ಸಂತಾಪ ಸೂಚಿಸಿದ ಜಗ್ಗೇಶ್!!

ಅತೀಹೆಚ್ಚು ವೀಕ್ಷಕರನ್ನು, ಅತೀ ಹೆಚ್ಚು ಕಲಾವಿದರನ್ನು ಹೊಂದಿದ್ದ ಜೀ ಕನ್ನಡ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಗೆ ನಿಧನದ ಸುದ್ದಿಯೊಂದು ಬಿರುಗಾಳಿಯಂತೆ ಬಡಿದಿದೆ.

ಕಾಮಿಡಿ ಕಿಲಾಡಿ ಶೋ ಲ್ಲಿ ಸ್ಕ್ರಿಪ್ಟ್ ರೈಟರ್ ಆಗಿದ್ದ ಮಿಳ್ಳೆ ಮೋಹನ್ ನಿಧಾನರಾಗಿದ್ದು, ಅವರ ಅಗಲಿಕೆಗೆ ನವರಸ ನಾಯಕ ಜಗ್ಗೇಶ್ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ. ತನ್ನ 27 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಮೋಹನ್ ಓರ್ವ ಅತ್ಯುತ್ತಮ ಬರಹಗಾರ, ಜೊತೆಗೆ ಎಲ್ಲರನ್ನೂ ನಗಿಸಬಲ್ಲ ನಾಟಕವನ್ನು ಕೊಡುಗೆಯಾಗಿ ನೀಡುತ್ತಿದ್ದ. ಈ ಕಂದನ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ರಾಯರು ಕುಟುಂಬ ವರ್ಗಕ್ಕೆ, ಬಂಧು ಬಳಗಕ್ಕೆ ನೀಡಲಿ ಎಂದು ಜಗ್ಗೇಶ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget
error: Content is protected !!
Scroll to Top
%d bloggers like this: