ಕೇಶದಾನ ಮಾಡುವ ಮೂಲಕ ಸಂತೃಪ್ತಿ ಕಂಡ ಮಹೇಶ್ ಪೇರಾಲು

Share the Article

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೇರಾಲಿನ ಈ ಯುವಕ
ಕ್ಯಾನ್ಸರ್ ರೋಗಿಗಳಿಗೆ ತಾನು ಎರಡು ವರ್ಷಗಳಿಂದ ಪ್ರೀತಿಯಿಂದ ಬೆಳೆಸಿದ ತಲೆಕೂದಲನ್ನು ದಾನ ಮಾಡುವ ಮೂಲಕ ನೋವಿನಲ್ಲಿರುವ ಕ್ಯಾನ್ಸರ್ ಪೀಡಿತರಿಗೆ ಚೈತನ್ಯ ತುಂಬಿದ್ದಾರೆ.

ಪೇರಾಲಿನ ಮಹೇಶ್ ಅವರು ಪುತ್ತೂರಿನ ಮುಳಿಯ ಫೌಂಡೇಷನ್ ಮುಖಾಂತರ ಸ್ವ ಇಚ್ಛೆಯಿಂದ ಕೇಶದಾನ ಮಾಡಿದ್ದಾರೆ. ಜ.7ರಂದು ಕೇಶದಾನ ಮಾಡಿರುತ್ತಾರೆ.

ಇವರು ನಾರಾಯಣ ನೇತ್ರಾಲಯ ಕಣ್ಣಿನ ಫೌಂಡೇಷನ್‌ ಡಾ. ರಾಜಕುಮಾರ್ ನೇತ್ರದಾನ ಕೇಂದ್ರಕ್ಕೆ ದೃಷ್ಟಿಯ ರಾಯಭಾರಿ ಅಗಿರುತ್ತರೆ. ಹಾಗು ರಕ್ತ ದಾನಿಯು ಅಗಿರುತ್ತಾರೆ.

ಇವರು ಪೇರಾಲು ದಿ. ಕೃಷ್ಣಪ್ಪ ಗೌಡ ಮತ್ತು ದಿ‌. ಯಶೋಧ ದಂಪತಿಗಳ ಪುತ್ರ. ಪತ್ನಿ ಸೀಮಾ ಹಾಗೂ ಪುತ್ರ ಆಯುಷ್ ರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

Leave A Reply