ಸುಳ್ಯ ಜಾತ್ರೆಗೆ ವೀಕೆಂಡ್ ಕರ್ಫ್ಯೂ ಹೊಡೆತ , ಬದುಕಿನ ತೊಟ್ಟಿಲು ತೂಗಲು ಬಂದ ಕಾರ್ಮಿಕರು ಬೀದಿ ಪಾಲು
ಸುಳ್ಯ ಜಾತ್ರೆಗೆ ಮೆರುಗು ನೀಡುವುದೆಂದರೆ ಅದು ತೊಟ್ಟಿಲುಗಳು. ಜಾಯಿಂಟ್ ವೀಲ್, ಬ್ರೇಕ್ ಡ್ಯಾನ್ಸ್, ಕೊಲಾಂಬಾಸ್, ಡ್ರಾಗನ್ ಟ್ರೆ, ಮಕ್ಕಳ ಆಟಿಕೆಗಳು ಇದು ಬಹುದೊಡ್ಡ ಆಕರ್ಷಣೆಗಳು. ಇದಕ್ಕಾಗಿ ಸಂಭ್ರಮಿಸಲೆಂದೇ ಸಾವಿರಾರು ಮಂದಿ ಸುಳ್ತಕ್ಕೆ ಬರುತ್ತಾರೆ.
ಆದರೆ ಈ ಬಾರಿ ಕೊರೊನಾ ಕರಿನೆರಳು ಇದರ ಮೇಲೆ ಬಿದ್ದಿದೆ. ವಾರದ ಹಿಂದೆ ಸುಳ್ಯಕ್ಕೆ ಈ ಆಟಿಕೆಗಳು ಬಂದಿದ್ದು ಅದು ಸುಳ್ಯ ತಲುಪಿ ಜೋಡಣೆ ಕಾರ್ಯ ನಡೆಯುತ್ತಿದ್ದಂತೆ ಸರಕಾರದ ಕರ್ಪ್ಯೂ ನಿಯಮ ಹೊರ ಬಿತ್ತು.
ಇದನ್ನೇ ನಂಬಿಕೊಂಡು ಜೀವನ ನಡೆಸುವ ಕೆಲಸಗಾರರು ತಲೆ ಮೇಲೆ ಕೈ ಹೊತ್ತುಕೊಳ್ಳುವಂತಾಗಿದೆ.ಸುಳ್ಯಕ್ಕೆ ಸುಮಾರು 12 ರಿಂದ 14 ಲೋಡ್ ಆಟಿಕೆಗಳು ಬಂದಿದ್ದು ಸಾಗಾಟ ಖರ್ಚು 3 ಲಕ್ಷಕ್ಕೂ ಹೆಚ್ಚು ತಗುಲಿದೆ. ಮೂರ್ನಾಲ್ಕು ದಿನಗಳ ಹಿಂದೆ ಇದನ್ನೆಲ್ಲ ಸುಳ್ಯಕ್ಕೆ ತಂದಿದ್ದಾರೆ.
ನಂತರ ಸರಕಾರ ಕರ್ಫ್ಯೂ ಘೋಷಣೆ ಮಾಡಿದೆ.ಇದರಿಂದ ಕಾರ್ಮಿಕರಿಗೆ ತುಂಬಾ ನಷ್ಟ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ನಮ್ಮ ಜತೆಗೆ ಇದನ್ನೆ ನಂಬಿಕೊಂಡಿರುವ 60-70 ನೌಕರರು ಇದ್ದಾರೆ. ಕರ್ಪ್ಯೂ ಘೋಷಣೆಯಿಂದ ದೊಡ್ಡ ಹೊಡೆತ ಬಿದ್ದಿದೆ ಎಂದು ಬಾಲಕೃಷ್ಣ ಕಾರ್ಕಳ ಹೇಳುತ್ತಾರೆ.