ಕೇಶ ವಿನ್ಯಾಸಕ್ಕೆ ನೀರಿಲ್ಲದಿದ್ದರೆ ಉಗುಳು ಸಾಕು ಎಂದು ಮಹಿಳೆಯ ತಲೆ ಮೇಲೆ ಉಗುಳಿದ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ !! | ಆತನ ಈ ದುಷ್ಕೃತ್ಯದ ವೀಡಿಯೊ ಇದೀಗ ವೈರಲ್

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ವರ್ಕ್‌ಶಾಪ್‌ನಲ್ಲಿ ಮಹಿಳೆಯೊಬ್ಬರ ಕೂದಲನ್ನು ಸ್ಟೈಲ್ ಮಾಡಲು ತಲೆಗೆ ನೀರು ಸಿಂಪಡಿಸುವ ಬದಲು ತನ್ನ ಉಗುಳನ್ನು ಬಳಸಿದ ವೀಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದ್ದು ತೀವ್ರ ಟೀಕೆಗೊಳಗಾಗಿದೆ.

Ad Widget

ಕೇಶ ವಿನ್ಯಾಸಕಾರ ಜಾವೇದ್ ಹಬೀಬ್, ಪೂಜಾ ಎನ್ನುವವರ ತಲೆಗೆ ಎಂಜಲು ಉಗಿದಿದ್ದಾರೆ. ಈ ಘಟನೆ ವಿವಾವದ ಸ್ವರೂಪ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕೇಶ ವಿನ್ಯಾಸಕಾರನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಹಬೀಬ್ ಕೃತ್ಯವನ್ನು ಖಂಡಿಸಿವೆ. ಈ ವಿಚಾರವಾಗಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

Ad Widget . . Ad Widget . Ad Widget . Ad Widget

Ad Widget

ದೇಶದ್ಯಂತ 850 ಸಲೂನ್ ಹೊಂದಿದ್ದ ಜಾವೇದ್ ಹಬೀಬ್, ಇತ್ತೀಚೆಗೆ ಮುಜಾಫ್ಪರನಗರದಲ್ಲಿ ಕೇಶವಿನ್ಯಾಸದ ಕಾರ್ಯಗಾರ ನಡೆಸಿದ್ದ. ಈ ವೇಳೆ ಪೂಜಾ ಅವರಿಗೆ ಕೇಶವಿನ್ಯಾಸ ಮಾಡುವಾಗ ನೀರು ಇಲ್ಲದಿದ್ದರೆ, ಎಂಜಲು ಬಳಸಿ ಎಂದು ಹೇಳಿ ಉಗಿಯಲಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Ad Widget
Ad Widget Ad Widget

ಜಾವೇದ್ ಹಬೀಬ್ ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದು, “ಜಾವೇದ್ ಹಬೀಬ್ ತಲೆಯ ಮೇಲೆ ಉಗುಳಿ ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಸಾರ್ವಜನಿಕವಾಗಿ ಅವರು ಈ ರೀತಿ ತಲೆಯ ಮೇಲೆ ಉಗುಳುತ್ತಿದ್ದರೆ, ಅವರು ತಮ್ಮ ಸಲೂನ್ ಉತ್ಪನ್ನಗಳಲ್ಲಿ ಇನ್ನೇನು ಬಳಸುತ್ತಾರೆ ಎಂದು ಯಾರಿಗೆ ಗೊತ್ತು. ಪೆದ್ದರು ಮಾತ್ರ ಅವರ ಸಲೂನ್ ಗೆ ಹೇರ್ ಕಟ್ ಮಾಡಲು ಹೋಗುತ್ತಾರೆ ಎಂಬ ಪ್ರತಿಕ್ರಿಯೆಗಳು ಈ ವೀಡಿಯೋಗೆ ಬಂದಿವೆ.

Leave a Reply

error: Content is protected !!
Scroll to Top
%d bloggers like this: