ಸಾಮಾನ್ಯ ವ್ಯಕ್ತಿಯ ಮೇಲೆ ಖಾಕಿಯ ದರ್ಪ ಪ್ರದರ್ಶನ | ಠಾಣೆಯಲ್ಲೇ ತನ್ನ ಕಾಲು ಒತ್ತಿಸಿಕೊಂಡ ಮಹಿಳಾ ಇನ್ಸ್ ಪೆಕ್ಟರ್

0 8

ರಕ್ಷಕರು ಎಂದ ತಕ್ಷಣ ನೆನಪಾಗುವವರೇ ಪೊಲೀಸ್.ಇಂತಹ ಕೆಲವು ರಕ್ಷಕರಿಂದ ಇತ್ತೀಚೆಗೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಅದೆಷ್ಟೋ ವಿಚಾರಗಳು ಹರಿದಾಡುತಿತ್ತು. ಇದನ್ನೆಲ್ಲಾ ನೋಡಿದಾಗ ‘ರಕ್ಷಕರೇ’ಅಥವಾ ‘ಭಕ್ಷಕರೇ’ಎಂಬ ಗೊಂದಲವುಂಟಾಗುತ್ತದೆ.

ಇದೀಗ ಇಂತಹದೆ ಉದಾಹರಣೆಯಾಗಿ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಖಾಕಿಗೆ ಗೌರವ ಸಲ್ಲಿಸೋ ವ್ಯಕ್ತಿಯ ಕೈಯಿಂದಲೇ ತನ್ನ ಕಾಲನ್ನು ಒತ್ತಿಸಿಕೊಂಡಿದ್ದಾಳೆ ಈಕೆ.ಹೌದು.ಸಂಭಾಲ್‌ ಜಿಲ್ಲೆಯ ಕೊತ್ವಾಲಿ ಪೊಲೀಸ್‌ ಠಾಣೆಯ ಮಹಿಳಾ ಇನ್ಸ್‌ಪೆಕ್ಟರೊಬ್ಬರು ವ್ಯಕ್ತಿಯೊಬ್ಬರಿಂದ ತನ್ನ ಕಾಲುಗಳನ್ನು ಒತ್ತಿಸಿಕೊಳ್ಳುತ್ತಿರುವ ದೃಶ್ಯ ಇದೀಗ ಎಲ್ಲಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಂಭಾಲ್‌ ಜಿಲ್ಲೆಯ ಕೊತ್ವಾಲಿ ಪೊಲೀಸ್‌ ಠಾಣೆಯ ಮಹಿಳಾ ಇನ್ಸ್‌ಪೆಕ್ಟರ್‌ ಶಬನಂ ಕಚೇರಿಯಲ್ಲಿ ಯಾರೊಂದಿಗೋ ಫೋನಿನಲ್ಲಿ ಮಾತನಾಡಿಕೊಂಡು, ವ್ಯಕ್ತಿಯೊಬ್ಬರ ಕೈಯಿಂದ ತನ್ನ ಕಾಲುಗಳನ್ನು ಒತ್ತಿಸಿಕೊಳ್ಳುತ್ತಿರುವ ದೃಶ್ಯ ಎಲ್ಲರ ಚರ್ಚೆಗೆ ಗ್ರಾಸವಾಗುತ್ತಿದೆ. ಮಹಿಳಾ ಇನ್ಸ್‌ಪೆಕ್ಟರ್‌ ಕಾಲನ್ನು ಒತ್ತುತ್ತಿರುವವರು ಉತ್ತರಾಖಂಡದ ಹಲ್ದ್ವಾನಿ ನಿವಾಸಿ ಎಂದು ಹೇಳಲಾಗಿದೆ.

ಈ ಘಟನೆ ಕಳೆದ ಬುಧವಾರ ನಡೆದಿದೆ. ʻನನಗೆ ಕತ್ತು ನೋವಿದೆ. ಹಾಗಾಗಿ ಆಕ್ಯುಪ್ರೆಶರ್ ವಿಧಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆʼ ಎಂದು ಕೇಳುಗರ ಪ್ರಶ್ನೆಗೆ ಉತ್ತರಿಸಿದ್ದಾಳೆ.ಮಹಿಳಾ ಇನ್ಸ್‌ಪೆಕ್ಟರ್‌ಗೆ ಕತ್ತು ನೋವಿನ ಸಮಸ್ಯೆ ಇದೆ. ಆದರೆ ಕಚೇರಿಯಲ್ಲಿ ಕುಳಿತು ಚಿಕಿತ್ಸೆ ಪಡೆಯುವುದು ಸರಿಯಲ್ಲ ಎಂದು ಸಂಭಾಲ್‌ನ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಹೇಳಿದರು.

Leave A Reply