ಬೆಂಗಳೂರಿನಲ್ಲಿ ಕೊರೋನ ಇದೆ ಎಂದು ಎಲ್ಲಾ ಕಡೆ ಕರ್ಪ್ಯೂ ಮಾಡೋದು ಸರೀನಾ?ಎಂದು ಪ್ರಶ್ನೆ ಮಾಡಿದ ಸಚಿವ ಕೆ.ಎಸ್ ಈಶ್ವರಪ್ಪ
ಬೆಂಗಳೂರು:ಕೊರೋನ ಅಧಿಕವಾಗಿದ್ದರಿಂದ ವೀಕೆಂಡ್ ಕರ್ಪ್ಯೂ ಜಾರಿ ಆದ ಕುರಿತು ಮಾತಾಡಿದ ಸಚಿವ ಕೆ.ಎಸ್ ಈಶ್ವರಪ್ಪ ರಾಜ್ಯದಲ್ಲಿ ಒಂದೇ ರೀತಿಯ ಕೋರೊನ ರೂಲ್ಸ್ ಇದೆ ಎಂದು ಯಾರು ಹೇಳಿದ್ದು? ಬೆಂಗಳೂರಿನಲ್ಲಿ ಕೊರೋನವಿದ್ದರೆ ಎಲ್ಲಾ ಕಡೆ ಯಾಕೆ ಕರ್ಪ್ಯೂ?ಕರ್ಪ್ಯೂಇಲ್ಲ ಏನೂ ಇಲ್ಲ. ನಮ್ಮ ಶಿವಮೊಗ್ಗದಲ್ಲಿ ಯಾವ ಸುಡುಗಾಡು ಇಲ್ಲ ಎಂದು ಹೇಳಿದ್ದಾರೆ.
ಇಂದು ಕ್ಯಾಬಿನೆಟ್ ಸಭೆಗೆ ಹೋಗುವ ಮುನ್ನ
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ
ಬೆಂಗಳೂರಿನಲ್ಲಿ ಕೊರೋನಾ ಇದೆ ಎಂದು ರಾಜ್ಯದ
ಇತರ ಜಿಲ್ಲೆಗಳಲ್ಲಿ ಕರ್ಪ್ಯೂ ಮಾಡೋದು ಸರಿನಾ
ಎಂದು ಜನ ನನ್ನ ಪ್ರಶ್ನಿಸುತ್ತಾರೆ. ಬೇರೆ ಜಿಲ್ಲೆಗಳಿಗೆ
ಇನ್ನೂ ಆದೇಶ ಬಂದಿಲ್ಲ. ನಾನು ಬೇಜಾರು
ಮಾಡಿಕೊಂಡಿಲ್ಲ. ಜನರ ಭಾವನೆಗಳನ್ನ ವ್ಯಕ್ತಪಡಿಸಿದ್ದೆ ಅಷ್ಟೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಕೋರೊನಾ-ಒಮಿಕ್ರಾನ್ ಸೋಂಕು ತಡೆ ಹಿನ್ನೆಲೆ ಬೆಂಗಳೂರಿನಲ್ಲಿ ಬಿಗಿ ಮಾಡೋದು ಮಾಡಿ. ಬೇರೆ ಜಿಲ್ಲೆಗಳಲ್ಲಿ ಮಾಡುವುದು ಬೇಡ. ಇದನ್ನೇ ಸಿಎಂ ಜೊತೆ ಮಾತನಾಡುವೆ. ತಜ್ಞರ ಸಲಹೆಯಂತೆ ಮೊನ್ನೆ ಕೊರೋನ ತಡೆಗೆ ಟೈಟ್ ರೂಲ್ಸ್ ಬಗ್ಗೆ ನಿರ್ಧಾರವಾಗಿತ್ತು. ಇಂದು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ. ಯಾವ ಜಿಲ್ಲೆಗಳಲ್ಲಿ ಸೋಂಕು ಕಡಿಮೆ ಇದೆ ಅಲ್ಲಿ ಬೇಡ,ಎಲ್ಲಿ ಸಮಸ್ಯೆ ಇಲ್ಲ ಅಲ್ಲಿ ತೆರವು ಮಾಡೋಣ ಎಂದು ಈಶ್ವರಪ್ಪ ಹೇಳಿದರು.