ತನ್ನ ಕೂದಲಿನ ಸಹಾಯದಿಂದ ಬರೋಬ್ಬರಿ 12,216 ಕೆ.ಜಿ ತೂಕದ ಬಸ್ಸನ್ನು ಎಳೆದು ಗಿನ್ನಿಸ್ ದಾಖಲೆ ಸೃಷ್ಟಿಸಿದ ಭಾರತೀಯ ಯುವತಿ !!

ನಮ್ಮ ದೇಶದಲ್ಲಿ ಸಾಧಿಸಲಾಗದ ಕೆಲಸವನ್ನು ಸಾಧಿಸಿಯೇ ತೀರುತ್ತೇನೆ ಎಂಬ ಛಲವಿರುವ ಪ್ರತಿಭೆಗಳು ಅದೆಷ್ಟೋ ಇದ್ದಾರೆ. ಇಂತಹ ಪ್ರತಿಭೆಗಳಲ್ಲಿ ಈಕೆಯೂ ಒಬ್ಬಳು. ಈಕೆ ಮಾಡಿರುವ ಸಾಧನೆ ಎಲ್ಲರನ್ನು ಬೆಚ್ಚಿಬೀಳಿಸುವಂತದ್ದು. ತನ್ನ ಕೂದಲಿನ ಸಹಾಯದಿಂದ ಬರೋಬ್ಬರಿ 12,216 ಕೆ.ಜಿ ತೂಕದ ಬಸ್ಸನ್ನು ಎಳೆದು ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾಳೆ ಪಂಜಾಬ್‌ನ ಈ ಯುವತಿ.

 

ಈಕೆಯ ಹೆಸರು ಆಶಾ ರಾಣಿ. ಈಗಾಗಲೇ ಹಲವಾರು ದಾಖಲೆಗಳನ್ನು ಸೃಷ್ಟಿಸಿರುವ ಆಶಾರಾಣಿ ಹೆಸರು ಅಷ್ಟಾಗಿ ಪ್ರಚಾರಕ್ಕೆ ಬರಲೇ ಇಲ್ಲ. 2016ರಲ್ಲಿ ಕೂಡ ಇದೇ ರೀತಿಯ ದಾಖಲೆ ಸೃಷ್ಟಿಸಿದ್ದ ಆಶಾ ಅವರು ಈಗ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.

ಅಂದಹಾಗೆ ಪಂಜಾಬ್‌ನ ಆಶಾರಾಣಿ ಅವರು 2014ರಲ್ಲಿ ಕಣ್ಣಿನ ರೆಪ್ಪೆಯಿಂದ 15.15 ಕೆಜಿ ತೂಕವನ್ನು ಎತ್ತಿದ್ದರು. ಇದರಲ್ಲಿ ಗಿನ್ನೆಸ್ ರೆಕಾರ್ಡ್ ಮಾಡಿದ್ದರು. 2019ರಲ್ಲಿ ಕಿವಿಗಳನ್ನು ಬಳಸಿ 1,700 ಕೆಜಿ ತೂಕದ ವ್ಯಾನ್ ಎಳೆದಿದ್ದರು. ಹಲ್ಲಿಗಳ ಸಹಾಯದಿಂದ ವಾಹನವನ್ನು ಕೇವಲ 22.16 ಸೆಕೆಂಡ್‌ಗಳಲ್ಲಿ 25 ಮೀಟರ್ ಎಳೆದಿದ್ದರು. ಹೀಗೆ ತಮ್ಮ ದೇಹದ ಬಹುತೇಕ ಅಂಗಗಳ ಮೂಲಕ ದಾಖಲೆ ಮಾಡಿದ್ದಾರೆ ಆಶಾ. ಇದೇ ಕಾರಣಕ್ಕೆ ಇವರು “ಐರನ್ ಕ್ವೀನ್” ಎನ್ನುವ ಖ್ಯಾತಿ ಪಡೆದಿದ್ದಾರೆ.

https://www.instagram.com/reel/CYR0rbMKGCn/?utm_source=ig_web_copy_link

ಇವರ ಗಿನ್ನಿಸ್ ರೆಕಾರ್ಡ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ಲಾಘನೆಗಳ ಸುರಿಮಳೆಯೇ ಬರುತ್ತಿದೆ. 12.216 ಕೆಜಿ ತೂಕದ ಡಬಲ್ ಡೆಕ್ಕರ್ ಬಸ್ ಅನ್ನು ತಮ್ಮ ಕೂದಲಿನಲ್ಲಿ ಎಳೆಯುತ್ತಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದು.

ವೈರಲ್ ಆಗಿರುವ ಈ ವೀಡಿಯೋದಲ್ಲಿ ಆಶಾ ರಾಣಿ ಅವರ ಜಡೆಗೆ ಹಗ್ಗ ಬಿಗಿದಿರುವುದನ್ನು ನೋಡಬಹುದು. ಅವರು ಅದರ ಸಹಾಯದಿಂದ ಕೆಂಪು ಮತ್ತು ಬೂದು ಬಣ್ಣದ ಡಬಲ್ ಡೆಕ್ಕರ್ ಬಸ್‌ನ್ನು ಎಳೆಯುತ್ತಿದ್ದಾರೆ. ಹಿಮ್ಮುಖವಾಗಿ ನಿಂತು ಹಿಂದೆ ಹೆಜ್ಜೆ ಹಾಕುತ್ತಿದ್ದಂತೆ, ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತದೆ, ನಂತರ ಅವರ ಪ್ರದರ್ಶನ ಗಿನ್ನೆಸ್ ರೆಕಾಡ್‌ರ್ನಲ್ಲಿ ದಾಖಲಾಗಿರುವುದನ್ನು ಕಾಣಬಹುದಾಗಿದೆ.


Leave A Reply

Your email address will not be published.