ಅಫ್ಘಾನಿಸ್ತಾನದಲ್ಲಿ ಮತ್ತೊಂದು ಮೂರ್ಖತನದ ಆದೇಶ ಹೊರಡಿಸಿದ ತಾಲಿಬಾನಿಗಳು !! | ಅಂಗಡಿಗಳಲ್ಲಿನ ಹೆಣ್ಣು ಗೊಂಬೆಗಳ ರುಂಡವನ್ನು ಕಡಿದು ವಿಕೃತಿ ಮೆರೆದ ನರ ರಕ್ಕಸರು

Share the Article

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದೆ. ಯಾರಿಗೂ ಹೆದರದೆ, ಹಿಂದೇಟು ಹಾಕದೆ ಇಷ್ಟ ಬಂದಂತೆ ಹೊಸ ನಿಯಮ ಜಾರಿಗೊಳಿಸುತ್ತಲೇ ಬಂದಿದ್ದಾರೆ. ಒಟ್ಟಾಗಿ ತಾಲಿಬಾನ್ ಹೆಣ್ಣು ಮಕ್ಕಳ ನರಕ ಎಂದೇ ಹೇಳುವಂತಾಗಿದೆ.

ಇತ್ತೀಚೆಗೆ ಜಾಹೀರಾತುಗಳಲ್ಲಿ ಹೆಣ್ಣು ಮಕ್ಕಳು ನಟಿಸಬಾರದು ಎಂದು ಆದೇಶ ಹೊರಡಿಸಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ತಾಲಿಬಾನಿ ಸರ್ಕಾರ ಇದೀಗ ಮತ್ತೊಂದು ವಿಚಿತ್ರ ಕಾನೂನನ್ನ ಹೊರಡಿಸಿದೆ.ಹೌದು.ದೇಶದಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ಗೊಂಬೆಯನ್ನ ಇಡಬಾರದು ಅಂತ ಆದೇಶ ಹೊರಡಿಸಿದೆ.ಇಷ್ಟೇ ಅಲ್ಲದೆ ಹೆಣ್ಣು ಗೊಂಬೆಗಳ ರುಂಡವನ್ನು ಕಿತ್ತು ನೆಲ ಸಮ ಮಾಡಿ ಹೆಣ್ಣಿಗೆ ಅವಮಾನ ಮಾಡಿದ್ದಾರೆ.

ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರನ್ನ ಆಕರ್ಷಿಸಲು ಹಾಗೂ ಮಾಡೆಲ್​ಗಳಂತೆ ಉಪಯೋಗಿಸಲಾಗುವ ಗೊಂಬೆಗಳನ್ನ ಇಡುವುದು ಶಹಿರಾ ಕಾನೂನಿಗೆ ವಿರುದ್ಧ. ಹಾಗಾಗಿ ಈ ಗೊಂಬೆಗಳನ್ನ ಕೂಡಲೇ ತೆರವು ಮಾಡಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ ಗೊಂಬೆಗಳ ತಲೆಯನ್ನ ಕತ್ತರಿಸಿರುವ ವಿಡಿಯೋವನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು, ಸಂದೇಶ ಕೂಡ ರವಾನಿಸಿದ್ದಾರೆ.

ಇನ್ನು ಈ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್​ ಆಗುತ್ತಿದ್ದು ತಾಲಿಬಾನಿಗಳ ಈ ಕ್ರೂರ ನಿಯಮಕ್ಕೆ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ. ಆದ್ರೆ ನನ್ನದೇ ಸರ್ಕಾರ, ನನ್ನದೆ ಕಾನೂನು ಎಂದು ಬೀಗುತ್ತಿರುವ ತಾಲಿಬಾನಿಗರು ಇದ್ಯಾವುದಕ್ಕು ಕ್ಯಾರೆ ಎನ್ನದೆ ಅಫ್ಘಾನಿಸ್ತಾನದಲ್ಲಿ ತಲೆ ಬುಡವಿಲ್ಲದ ಕಾನೂನಗಳನ್ನು ಜಾರಿ ಮಾಡುತ್ತಲೇ ಇದ್ದಾರೆ.ಬದುಕಲು ಅಸಾಧ್ಯವಾಗುವಂತೆ ಜನರನ್ನು ಕಟ್ಟಿಹಾಕುತಿದೆ ತಾಲಿಬಾನ್ ಸರ್ಕಾರ.

Leave A Reply

Your email address will not be published.