ಈ ಬಾರಿ ಮಹಾಮಾರಿಯ ವಿರುದ್ಧ ಹೋರಾಡಿ, ಜನರನ್ನು ಕಾಪಾಡಲು ಬರುತ್ತಿದ್ದಾನೆ ‘ಮಾದ್ರೂ’!! ಬಗೆ ಬಗೆಯ ಸ್ಯಾನಿಟೈಜರ್, ಹೊಸ ವಿನ್ಯಾಸದ ಮಾಸ್ಕ್ ಬಳಸುತ್ತಿರುವವರಿಗೆ ಸಿಗಲಿದೆ ಕೊಂಚ ರಿಲೀಫ್
ಪ್ರತಿದಿನವೂ ಹೊಸ ಹೊಸ ಹೆಸರಿನ ಸಾನಿಟೈಜರ್, ಹೊಸ ಹೊಸ ವಿನ್ಯಾಸದ ಮಾಸ್ಕ್ ಬಳಸಿದರೂ ಕಳೆದ ಮೂರು ವರ್ಷಗಳಿಂದ ಮತ್ತೆ ರಾಜ್ಯವನ್ನು ಕೊರೋನ ಕಂಟಕವಾಗಿ ಕಾಡುತ್ತಿದೆ. ಮಹಾಮಾರಿಯ ನಿಯಂತ್ರಣಕ್ಕೆ ವಾಕ್ಸಿನ್ ಹಾಗೂ ಮಾತ್ರೆಗಳು ಈಗಾಗಲೇ ಪರಿಚಯವಿದ್ದು ಈ ನಡುವೆ ಹೊಸ ಮಾತ್ರೆಯೊಂದು ಕೊರೋನ ಮಾರಿಗೆ ರಾಮಬಾಣವಾಗಲಿದೆ.
ಹೌದು. ಮಾದ್ರೂ ಎಂಬ ಹೆಸರಿನ ಈ ಮಾತ್ರೆಯು ಕೊರೋನ ಹೆಮ್ಮಾರಿಯ ವಿರುದ್ಧ ಹೋರಾಡಿ ಶಮನಗೊಳಿಸುವಲ್ಲಿ ಪಾತ್ರವಹಿಸುತ್ತದೆ ಎಂದು ದೇಶದ ಖ್ಯಾತ ಔಷದ ತಯಾರಕ ಕಂಪೆನಿಯಾದ ಡಾ. ರೆಡ್ಡಿ ಔಷದ ಲ್ಯಾಬ್ ಪರಿಚಯಿಸಿದೆ. ಈ ಮಾತ್ರೆಗೆ ಭಾರತೀಯ ಔಷದ ನಿಯಂತ್ರಣ ಪ್ರಾಧಿಕಾರವು ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನೇನು ಮಾರುಕಟ್ಟೆಗೆ ಬರಲಿದೆ.
ಐದು ದಿನಗಳ ಕೋರ್ಸ್ ಇದಾಗಿದ್ದು, ಒಂದು ಮಾತ್ರೆಯ ಬೆಲೆ 35 ರಂತೆ ಹಾಗೂ 40 ಮಾತ್ರೆಗಳ ಕೋರ್ಸ್ನ ಬೆಲೆಯು 1400 ಆಗಿದೆ. ಮಾದ್ರೂ ಮಾತ್ರೆಯು ವೈರಸ್ ವಿರುದ್ಧ ಹೋರಾಡಿ ತುರ್ತು ಚಿಕಿತ್ಸೆಗೆ ಸಹಕಾರಿಯಾಗಲಿದೆ.