ಮಂಗಳೂರು: ಮೂಕ ಪ್ರಾಣಿಯ ನೋವಿಗೆ ಸ್ಪಂದಿಸಿ ತನ್ನೆರಡು ಕಾಲು ಕಳೆದುಕೊಂಡ | ಅದೇ ನೋವಿನಿಂದ ಮಾನಸಿಕವಾಗಿ ಕುಗ್ಗಿ ಜೀವನಕ್ಕೆ ಅಂತ್ಯ ಹಾಡಿದ

ಮಂಗಳೂರು: ಮೂಕಪ್ರಾಣಿಯ ಪ್ರಾಣ ಕಾಪಾಡಲು ಹೋಗಿ ರೈಲಿನಡಿ ಸಿಲುಕಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾರೆ.

ಮೃತ ಯುವಕನನ್ನು ಗೋಲ್ಡನ್ ಬಸ್‌ನ ನಿರ್ವಾಹಕರಾಗಿದ್ದ ಚೇತನ್(21) ಎಂದು ತಿಳಿದುಬಂದಿದೆ.

ಎರಡು ತಿಂಗಳ ಹಿಂದೆ ಆಡಿನ ಮರಿಯೊಂದು ರೈಲು ಹಳಿಯುದ್ದಕ್ಕೂ ಓಡಾಡಿಕೊಂಡಿದ್ದನ್ನು ಕಂಡ ಚೇತನ್ ಅದನ್ನು ರಕ್ಷಿಸಲು ಮುಂದಾಗಿದ್ದರು. ಆಡನ್ನು ಹಳಿಯಿಂದ ಮೇಲೆತ್ತಿ ರಕ್ಷಿಸುವ ವೇಳೆ ರೈಲು ಅಪ್ಪಳಿಸಿದ್ದು, ಚೇತನ್ ಕಾಲಿನ ಮೇಲೆಯೇ ರೈಲು ಹರಿದು ಹೋಗಿತ್ತು.

ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಅವರನ್ನು ಉಳಿಸುವುದಕ್ಕಾಗಿ ಗೆಳೆಯರು ಬೀದಿ ಬದಿ ಹಣ ಸಂಗ್ರಹಿಸಿದಲ್ಲದೆ, ದಾನಿಗಳು ತಮ್ಮಿಂದಾದಷ್ಟು ಹಣ ನೀಡಿ ಸಹಕರಿಸಿದ್ದರು. ಸ್ವಲ್ಪ ಚೇತರಿಸಿಕೊಂಡ ಚೇತನ್ ಅವರ ಡಿಸ್ಟಾರ್ಜ್ ಮಾಡಿ ಮನೆಗೆ ಕರೆತಂದಿದ್ದರು. ಮಾನಸಿಕವಾಗಿ ಕುಗ್ಗಿದ ಅವರು ಸರಿಯಾಗಿ ಆಹಾರವನ್ನೂ ಸೇವಿಸದೆ ಪುನಃ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ನಿನ್ನೆ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

Leave A Reply