ಹಿಂದೂ ದೇವಾಲಯದ ಎದುರು ಗೋಮಾಂಸ ನೇತುಹಾಕಿ ವಿಕೃತಿ ಮೆರೆದ ದುಷ್ಕರ್ಮಿಗಳು !!

ಹಿಂದೂ ದೇವಸ್ಥಾನದ ಎದುರು ಗೋಮಾಂಸ ನೇತು ಹಾಕಿ ದುಷ್ಕೃತ್ಯ ಮೆರೆದಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

 

ಬಾಂಗ್ಲಾದೇಶದಲ್ಲಿನ ಹಟಿಬಂಧ ಉಪಜಿಲಾ ಜಿಲ್ಲೆಯಲ್ಲಿನ ಗಂಡುಕುರಿ ಎಂಬ ಹಳ್ಳಿಯಲ್ಲಿಯೇ ದುಷ್ಕರ್ಮಿಗಳು ಇಂತಹ ಕೃತ್ಯ ಎಸಗಿದ್ದಾರೆ. ಹಸಿ ಗೋಮಾಂಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಆ ಚೀಲವನ್ನು ದೇವಾಲಯದ ಎದುರು ತೂಗು ಹಾಕಿದ್ದಾರೆ. ಅಲ್ಲಿನ ಮೂರು ಹಿಂದೂ ದೇವಾಲಯದಲ್ಲಿ ಈ ರೀತಿ ಮಾಂಸವನ್ನು ತೂಗು ಹಾಕಿ ದುಷ್ಕೃತ್ಯ ಮೆರೆದಿದ್ದಾರೆ.

ಇದಕ್ಕೆ ಅಲ್ಲಿನ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೂರು ಸಲ್ಲಿಸಿದ್ದಾರೆ. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತಂತೆ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದವರನ್ನು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲಿನ ಎರಡು ಕಾಳಿ ದೇವಾಲಯ ಹಾಗೂ ರಾಧಾ ಗೋವಿಂದ ದೇವಾಲಯದ ಎದುರೇ ಗೋಮಾಂಸ ಇರುವ ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿವೆ ಎಂದು ಉಪಜಿಲಾ ಪೂಜಾ ಪರಿಷತ್ತಿನ ಅಧ್ಯಕ್ಷ ದಿಲೀಪ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಲವು ಶಂಕಿತ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ಈಗಾಗಲೇ ನಡೆಸುತ್ತಿದ್ದಾರೆ.

Leave A Reply

Your email address will not be published.