4 ವರ್ಷಗಳಲ್ಲಿ 5 ಪದವಿ ಪಡೆದ 15 ವರ್ಷದ ಬಾಲಕ !

15 ವರ್ಷದ ಜ್ಯಾಕ್‌ರಿಕೊ ಎಂಬಾತ ಈ ವರ್ಷ ಡಿಸೆಂಬರ್ 14 ರಂದು ಸ್ನಾತಕೋತ್ತರ ಪದವಿಯನ್ನು ಪಡೆದರು ಅತಿ ಕಡಿಮೆ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವುದು ಇತಿಹಾಸವಾಗಿದೆ.

15ರ ಹರೆಯದ ಬಾಲಕನೊಬ್ಬ ಅಮೆರಿಕದ ನೆವಾಡಾ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಮಾತ್ರವಲ್ಲದೆ 4 ವರ್ಷದಲ್ಲಿ ಪದವಿಯನ್ನು ಪಡೆದುಕೊಂಡಿರುವುದನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 15 ವರ್ಷದ ಜ್ಯಾಕ್ ರಿಕೊ ಎಂಬಾತ ಈ ವರ್ಷ ಡಿಸೆಂಬರ್ 14 ರಂದು ಸ್ನಾತಕೋತ್ತರ ಪದವಿಯನ್ನು ಪಡೆದರು. ಅತಿ ಕಡಿಮೆ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವುದು ಇತಿಹಾಸವಾಗಿದೆ. ಕ್ಯಾಲಿಫೋರ್ನಿಯಾದಿಂದ ಬಂದ ಜ್ಯಾಕ್ ರಿಕೊ ತನ್ನ ತಾಯಿ ನಡೆಸುತ್ತಿದ್ದ ತನ್ನ ಹೋಮ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾನೆ.

ಆರಂಭದಲ್ಲಿ ಓದು ಅಂದರೆ ಓಡಿ ಹೋಗುತ್ತಿದ್ದ ಆತ ನಾಲ್ಕನೇ ಸು ವಯಸ್ಸಿನಲ್ಲಿ ಸರಿಯಾಗಿ ಓದಲಾರಂಭಿಸಿದನು. ಈತ 11 ವರ್ಷದವನಾಗಿದ್ದಾಗ ಫುಲ್ಬರ್ಟನ್ ಕಾಲೇಜಿನ ಪ್ರವೇಶಕ್ಕಾಗಿ ಪರೀಕ್ಷೆ ಬರೆದನು, ಅದರಲ್ಲಿ ಆತ ಹೆಚ್ಚಿನ ಅಂಕ ಪಡೆದು ಕಾಲೇಜು ಹಂತದ ಕೋರ್ಸ್‌ಗೆ ಪ್ರವೇಶ ಪಡೆದನು. ಎರಡು ವರ್ಷಗಳ ಅವಧಿಯಲ್ಲಿ ಜ್ಯಾಕ್ ರಿಕೊ ನಾಲ್ಕು ಪದವಿ ಕೋರ್ಸ್‌ಗಳನ್ನು ಮಾಡಿದ್ದಾನೆ.

ಆತ 14ನೇ ವಯಸ್ಸಿನಲ್ಲಿದ್ದಾಗ ನೆವಡಾ ವಿಶ್ವವಿದ್ಯಾಲಯದಲ್ಲಿ ತರಗತಿಗಳನ್ನು ಪ್ರಾರಂಭಿಸಿದನು ಮತ್ತು ಡಿಸೆಂಬರ್ 14 ರಂದು ಸ್ನಾತಕೋತ್ತರ ಪದವಿ ಗಳಿಸಿದ್ದಾನೆ.

Leave A Reply

Your email address will not be published.